ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ 9 ಅಧಿಕಾರಿಗಳ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು, ಮಂಗಳೂರು, ಉಡುಪಿ, ಬೀದರ್ ಸೇರಿದಂತೆ 7 ಜಿಲ್ಲೆಗಳಲ್ಲಿ 9 ಅಧಿಕಾರಿಗಳ ಮನೆ, ಕಚೇರಿ, ಸಂಬಂಧಿಕರ ನಿವಾಸ ಸೇರಿದಂತೆ ಒಟ್ಟು 40 ಕಡೆಗಳಲ್ಲಿ 300 ಎಸಿಬಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಪ್ರತಿನಿತ್ಯ ಮೊಸರಿನ ಸೇವನೆಯಿಂದ ದೂರವಾಗುತ್ತೆ ರೋಗ
ಯಾವೆಲ್ಲ ಅಧಿಕಾರಿಗಳ ಮನೆ ಮೇಲೆ ದಾಳಿ ಇಲ್ಲಿದೆ ಮಾಹಿತಿ:
* ಕೆ ಆರ್ ಐ ಡಿ ಸಿ ಎಲ್ – ಬೆಂಗಳೂರು ಚೀಫ್ ಇಂಜಿನಿಯರ್ ಆರ್ ಬಿ ಕುಲ್ಕರ್ಣಿ
* ಮಂಗಳೂರು ನಗರಾಭಿವೃದ್ಧಿ ಘಟಕ ಎಕ್ಸ್ ಕ್ಯೂಟಿವ್ ಇಂಜಿನಿಯರ್ ಜಿ.ಶ್ರೀಧರ
* ಕೆ ಆರ್ ಐ ಡಿ ಸಿ ಎಲ್ ಉಡುಪಿ ವಿಭಾಗದ ಎಕ್ಸ್ ಕ್ಯೂಟಿವ್ ಇಂಜಿನಿಯರ್ ಕೃಷ್ಣ ಎಸ್
* ಹರ್ಬಲ್ ಪ್ಲಾನಿಂಗ್ ಮಾಲೂರು – ಅಸಿಸ್ಟೆಂಟ್ ಡೈರೆಕ್ಟರ್ ಹೆಚ್.ಆರ್.ಕೃಷ್ಣಪ್ಪ
* ರೂರಲ್ ಡೆವಲಪ್ ಮೆಂಟ್ ಬೀದರ್ – ಜೂನಿಯರ್ ಇಂಜಿನಿಯರ್ ಸುರೇಶ್ ಮೊಹರೆ
* ಸೋಷಿಯಲ್ ಫಾರೆಸ್ಟ್ ಡಿಪಾರ್ಟ್ ಮೆಂಟ್ ಮಂಡ್ಯ – ಟಿಡಿಸಿಎಫ್ ವೆಂಕಟೇಶ್
* ಬೆಸ್ಕಾಂ ವಿಜಯನಗರ ಎಇಇ ಸಿದ್ದರಾಮ ಮಲ್ಲಿಕಾರ್ಜುನ
* ಸೀನಿಯರ್ ಮೋಟರ್ ವೆಹಿಕಲ್ಸ್ ಇನ್ಸ್ ಪೆಕ್ಟರ್ ಬೆಂಗಳೂರು-ಕೃಷ್ಣಮೂರ್ತಿ
* ಎಲೆಕ್ಟ್ರಿಕಲ್ ಇನ್ ಪೆಕ್ಟರ್ ಬಳ್ಳಾರಿ – ವಿಜಯ್ ಕುಮಾರ್ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.