ಐವಿಎಫ್ ತಂತ್ರಜ್ಞಾನದ ಮೂಲಕ ತಾಯಿಯೊಬ್ಬರು ನಾಲ್ವರು ನವಜಾತ ಶಿಶುಗಳಿಗೆ ಜನ್ಮ ನೀಡಿದ್ದಾರೆ. ಮಾಧ್ಯಮಗಳು ನೀಡಿರುವ ಮಾಹಿತಿಯ ಪ್ರಕಾರ ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆ ಮೂವರು ಗಂಡು ಹಾಗೂ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಡಾ. ಶಶಿ ಹಾಗೂ ಡಾ. ಸಚಿನ್ ಡೂಬೆ ನೇತೃತ್ವದಲ್ಲಿ ಮಹಿಳೆಗೆ ಯಶಸ್ವಿ ಹೆರಿಗೆ ಮಾಡಿಸಲಾಗಿದೆ.
ಉತ್ತರ ಪ್ರದೇಶ ಸರ್ಕಾರ ಜನಸಂಖ್ಯಾ ನಿಯಂತ್ರಣ ಕರಡು ಮಸೂದೆಯನ್ನ ಬಿಡುಗಡೆ ಮಾಡಿದ ಕೇವಲ ಒಂದು ದಿನದಲ್ಲೇ ಮಹಿಳೆ ನಾಲ್ವರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಪ್ರಸ್ತಾವಿತ ಮಸೂದೆಯ ಪ್ರಕಾರ ಎರಡಕ್ಕಿಂತ ಹೆಚ್ಚು ಮಕ್ಕಳನ್ನ ಹೊಂದಿರುವವರಿಗೆ ಸರ್ಕಾರಿ ಕೆಲಸ, ಸರ್ಕಾರಿ ಸಬ್ಸಿಡಿ ಹಾಗೂ ಚುನಾವಣೆಗಳಲ್ಲಿ ಸ್ಪರ್ಧಿಸೋದ್ರಿಂದ ನಿರ್ಬಂಧ ಹೇರುತ್ತದೆ.
BIG BREAKING: ರಾಜ್ಯದಲ್ಲಿಂದು ಕೊರೋನಾದಿಂದ 45 ಮಂದಿ ಸಾವು, ಜಿಲ್ಲೆಗಳಲ್ಲಿ ಸೋಂಕು ಇಳಿಕೆ- ಇಲ್ಲಿದೆ ಮಾಹಿತಿ
ಇನ್ನು ಈ ಹೆರಿಗೆಯ ವಿಚಾರವಾಗಿ ಮಾತನಾಡಿದ ಡಾ. ಶಶಿ ಅರೋರಾ, ಈ ದಂಪತಿಯು ಅನೇಕ ವರ್ಷಗಳಿಂದ ಮಗುವಿಗೆ ಕಾತರಿಸಿತ್ತು. ಇವರಿಗೆ ನೈಸರ್ಗಿಕವಾಗಿ ಮಗು ಜನಿಸೋದು ಸಾಧ್ಯವಿಲ್ಲದ ಬಳಿಕ ಐವಿಎಫ್ ಚಿಕಿತ್ಸೆ ಆರಂಭಿಸಲಾಯ್ತು. 2 ವರ್ಷಗಳ ಚಿಕಿತ್ಸೆಯ ಬಳಿಕ ಗರ್ಭಿಣಿ ನಾಲ್ವರು ಮಕ್ಕಳಿಗೆ ಜನ್ಮ ನೀಡಿದ್ದಾಳೆ ಎಂದು ಹೇಳಿದ್ರು.