ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ತ್ಯಜಿಸಿ ಬಿಜೆಪಿಗೆ ಸೇರ್ಪಡೆಯಾಗಿದ್ದ ಮಾಜಿ ಸಚಿವ ಎ. ಮಂಜು ಪುನಃ ಕಾಂಗ್ರೆಸ್ ಪಕ್ಷಕ್ಕೆ ವಾಪಸ್ಸಾಗಲಿದ್ದಾರೆ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಬೆಂಬಲಿಗರ ಮೂಲಕ ಮತ್ತೆ ಕಾಂಗ್ರೆಸ್ ಸೇರ್ಪಡೆಗೆ ಮಂಜು ಪ್ರಯತ್ನಿಸುತ್ತಿದ್ದಾರೆ ಎಂಬ ಹೇಳಿಕೆಗಳ ನಡುವೆಯೇ ಎಲ್ಲಾ ವದಂತಿಗಳಿಗೆ ಸ್ವತಃ ಮಂಜು ತೆರೆ ಎಳೆದಿದ್ದಾರೆ.
ಹಾಸನದಲ್ಲಿ ಈ ವಿಚಾರವಾಗಿ ಮಾತನಾಡಿದ ಅವ್ರು, ಈ ರೀತಿಯ ಯಾವುದೇ ವಿಚಾರವೂ ನನ್ನ ಮುಂದೆ ಇಲ್ಲ. ಮಂಜು ಆಲ್ವೇಸ್ ಎ ಮಂಜು. ನನ್ನ ಬಗ್ಗೆ ನಾನೇ ತೀರ್ಮಾನ ಮಾಡಬೇಕು. ಬೇರೆಯವರು ಹೇಳಿದ್ರೆ ಹೇಗೆ..? ಜಿಲ್ಲೆ ಜನ ನನ್ನನ್ನ ನೋಡಿ 6 ಲಕ್ಷ ಮತ ನೀಡಿದ್ದಾರೆ. ನಾನು ಯಾರನ್ನೂ ಬಿಜೆಪಿಗೆ ಸೇರ್ಪಡೆ ಮಾಡಿಲ್ಲ. ನನ್ನ ಸ್ವಂತ ಬಲದಿಂದ ಸ್ಪರ್ಧೆಗೆ ನಿಂತಿದ್ದೆ. ಬ್ಯಾಡ್ ಲಕ್ನಿಂದಾಗಿ ಸೋತು ಹೋದೆ. ಈಗ ನಮ್ಮದೇ ಸರ್ಕಾರ ಅಧಿಕಾರದಲ್ಲಿ ಇದೆ. ಪ್ರಧಾನಿ ಮೋದಿ ಅವರ ಪರವಾಗಿ ನಾನು ಇರುತ್ತೇನೆ ಎಂದು ಹೇಳಿದ್ದಾರೆ.
ಎ. ಮಂಜು ಈ ಹಿಂದೆ ಕೂಡ ಕಾಂಗ್ರೆಸ್ ಸೇರುವ ವದಂತಿಯನ್ನ ಅಲ್ಲಗಳೆದಿದ್ದಾರೆ. ಆದರೆ ಶನಿವಾರ ಮಂಜು ಬೆಂಬಲಿಗರು ಡಿ.ಕೆ. ಶಿವಕುಮಾರ್ರನ್ನ ಭೇಟಿ ಮಾಡಿಯೋದು ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿತ್ತು.