ಕೊರೊನಾ ವೈರಸ್ ರೋಗದ ವಿರುದ್ಧ ಲಸಿಕೆ ಅತಿದೊಡ್ಡ ಅಸ್ತ್ರವೆಂದು ಪರಿಗಣಿಸಲಾಗುತ್ತಿದೆ. 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ದೇಶದಲ್ಲಿ ಲಸಿಕೆ ನೀಡಲಾಗುತ್ತಿದೆ. ಸಣ್ಣ ಮಕ್ಕಳಿಗೆ ಇನ್ನೂ ಕೊರೊನಾ ಲಸಿಕೆ ಬಂದಿಲ್ಲ. ಈ ಮಧ್ಯೆ ಜೈಡಸ್ ಕ್ಯಾಡಿಲಾ ಲಸಿಕೆ ಜೈಕೋವ್-ಡಿ ತುರ್ತು ಬಳಕೆಗೆ ಅನುಮೋದನೆ ಪಡೆಯಲು ಇನ್ನೂ ಕೆಲವು ದಿನಗಳು ಬೇಕೆಂದು ಮೂಲಗಳು ಹೇಳಿವೆ.
ಜೈಡಸ್ ಕ್ಯಾಡಿಲಾ, ಕೊರೊನಾ ಲಸಿಕೆ ಜೈಕೋವ್-ಡಿ ಯ ತುರ್ತು ಬಳಕೆಗಾಗಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ ಅನುಮತಿ ಕೋರಿದೆ. ಈ ಲಸಿಕೆ 12 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಲಭ್ಯವಾಗಲಿದ್ದು, ಹಂತ -3 ಪ್ರಯೋಗಗಳು ಪೂರ್ಣಗೊಂಡಿವೆ. ಜೈಡಸ್ ಕ್ಯಾಡಿಲಾ ಸಲ್ಲಿಸಿದ ಅರ್ಜಿಯ ಪ್ರಾಥಮಿಕ ಮೌಲ್ಯಮಾಪನ ನಡೆಯುತ್ತಿದೆ. ಶೀಘ್ರದಲ್ಲೇ ಎಸ್ಇಸಿ ಸಭೆ ನಡೆಯಲಿದೆ. ಅಂಕಿಅಂಶಗಳು ತೃಪ್ತಿಕರವೆನಿಸಿದ್ರೆ ಜೈಕೋವ್-ಡಿ ಯ ತುರ್ತು ಬಳಕೆಗೆ ಈ ವಾರ ಅನುಮೋದನೆ ಸಿಗಲಿದೆ.
ಮಗಳ ಜೊತೆ ಆಡ್ತಿರುವ ಕೊಹ್ಲಿ ಫೋಟೋ ವೈರಲ್
ಜೈಕೋವ್-ಡಿಗೆ ಅನುಮೋದನೆ ಸಿಕ್ಕಲ್ಲಿ ಅದು ದೇಶದ ಐದನೇ ಕೋವಿಡ್ -19 ಲಸಿಕೆಯಾಗಲಿದೆ. ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ, ಕೋವಾಕ್ಸಿನ್ ಮತ್ತು ಕೊವಿಶೀಲ್ಡ್ ಗೆ ಅನುಮೋದನೆ ನೀಡಿದೆ. ಇದರ ನಂತರ, ಸ್ಪುಟ್ನಿಕ್-ವಿ ಮತ್ತು ಮಾಡರ್ನಾದ ಕೊರೊನಾ ಲಸಿಕೆಯನ್ನು ಡಿಸಿಜಿಐ ಅನುಮೋದಿಸಿದೆ.