ಬಹಳ ದಿನಗಳ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಮಾತನಾಡಿರುವ ಮಂಡ್ಯದ ಮಾಜಿ ಸಂಸದೆ ಹಾಗೂ ಚಿತ್ರನಟಿ ರಮ್ಯಾ, ಚಿತ್ರರಂಗಕ್ಕೆ ಮತ್ತೆ ಕಾಲಿಡುವ ಕುರಿತ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಸಕ್ರಿಯರಾಗಿರುವ ರಮ್ಯಾ, ತಮ್ಮ ಸಮಕಾಲೀನ ನಟರೊಂದಿಗೆ ಎಂಗೇಜ್ ಆಗಿರುತ್ತಾರೆ. ಆರ್‌ಜೆ ಸೋನು ವೇಣುಗೋಪಾಲ್ ಜೊತೆಗೆ ಇನ್‌ಸ್ಟಾಗ್ರಾಂನಲ್ಲಿ ಲೈವ್ ಚಿಟ್‌ಚಾಟ್ ನಡೆಸಿದ ರಮ್ಯಾ, ತಾವೀಗ ಹೇಗಿದ್ದಾರೋ ಹಾಗೇ ಇರಲು ಖುಷಿಯಾಗಿದ್ದು, ಚಿತ್ರಗಳನ್ನು ನೋಡಿಕೊಂಡು ಎಂಜಾಯ್ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
ಈ ಮಾತು ಕೇಳುತ್ತಿದ್ದಂತೆ ಅಧಿಕಾರಿಯನ್ನು ತಬ್ಬಿಕೊಂಡ ಕೇಂದ್ರ ಸಚಿವ….!
ಪ್ರಸಕ್ತ ಕಾಲಘಟ್ಟದ ಎಲ್ಲಾ ನಟಿಯರನ್ನೂ ತಾವು ಇಷ್ಟಪಡುವುದಾಗಿ ತಿಳಿಸಿದ ರಮ್ಯಾ, ತಾವು ಯಾರ ಮದುವೆಯನ್ನೂ ಅಟೆಂಡ್ ಮಾಡದೇ ಇರುವ ಕಾರಣದಿಂದ ತಮ್ಮ ಮದುವೆಗೆ ಯಾರೊಬ್ಬರೂ ಬರುವುದಿಲ್ಲವೇನೋ ಎಂದು ಜೋಕ್ ಸಹ ಮಾಡಿದ್ದಾರೆ.