ಟೆಕ್ಸಾಸ್: ಮದುವೆ ಅನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖ ಕ್ಷಣ. ತಮ್ಮ ಕಲ್ಯಾಣದ ಬಗ್ಗೆ ಹಲವು ರೀತಿಯ ಕನಸು ಕಟ್ಟಿಕೊಂಡಿರುತ್ತಾರೆ. ಸಮುದ್ರದಾಳದಲ್ಲಿ, ವಿಮಾನದಲ್ಲಿ ಹೀಗೆ ಇನ್ನಿತರೆ ರೀತಿಯಲ್ಲಿ ವಿಶಿಷ್ಟವಾಗಿ ಮದುವೆಯಾದವರಿದ್ದಾರೆ. ಆದರೆ ಇಲ್ಲೊಂದೆಡೆ ಆಸ್ಪತ್ರೆಯಲ್ಲಿ ವಧು – ವರ ವಿವಾಹ ಬಂಧನಕ್ಕೊಳಗಾಗಿದ್ದಾರೆ.
ಹೌದು, ಈ ಹೃದಯಸ್ಪರ್ಶಿ ಘಟನೆ ನಡೆದಿರುವುದು ಅಮೆರಿಕಾದ ದಕ್ಷಿಣ ಟೆಕ್ಸಾಸ್ ನಲ್ಲಿ. ಮದುವೆಯ ಸಮಯದಲ್ಲಿ ಪ್ರೀತಿಪಾತ್ರರು ತಮ್ಮ ಜೊತೆಗೆ ಇರಬೇಕೆಂದು ಬಯಸುತ್ತಾರೆ. ಹಾಗೆಯೇ ನವವಧುವಿಗೂ ತನ್ನ ಮದುವೆಯಲ್ಲಿ ಅಜ್ಜಿ ಇರಬೇಕೆಂಬ ಬಯಕೆಯಿತ್ತು.
ಶಿವಮೊಗ್ಗ: ಹಾಡಹಗಲೇ ವ್ಯಕ್ತಿಯ ಕೊಲೆ
ಆದರೆ ವಧುವಿನ ಅಜ್ಜಿಗೆ ಶ್ವಾಸಕೋಶದ ಕ್ಯಾನ್ಸರ್ ಇದ್ದುದ್ದರಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೀಗಾಗಿ ಆಸ್ಪತ್ರೆಯಲ್ಲೇ ಮದುವೆ ಮಾಡಿಕೊಳ್ಳಬೇಕು ಎಂದು ವಧು ನಿರ್ಧರಿಸಿದ್ದಾಳೆ. ಆಸ್ಪತ್ರೆಯವರ ಒಪ್ಪಿಗೆ ಪಡೆದು ಅಜ್ಜಿಯ ಎದುರಲ್ಲಿ ವಧು – ವರ ಮದುವೆಯಾಗಿದ್ದು, ನೆರೆದಿದ್ದವರ ಕಣ್ಣಂಚಲ್ಲಿ ಕಣ್ಣೀರು ಜಿನುಗಿದೆ. ಈ ದೃಶ್ಯವನ್ನು ಫೇಸ್ಬುಕ್ ನಲ್ಲಿ ಮೆಥೋಡಿಸ್ಟ್ ಆರೋಗ್ಯ ಕೇಂದ್ರ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
https://www.youtube.com/watch?v=xS_IJum3a5w