ರಾಜ್ಯದಲ್ಲಿ ಕನ್ನಂಬಾಡಿ ಕಾಳಗ ದಿನಕ್ಕೊಂದು ಆಯಾಮವನ್ನ ಪಡೆಯುತ್ತಿದೆ. ಡ್ಯಾಂ ಸುರಕ್ಷತೆ ವಿಚಾರವಾಗಿ ಶುರುವಾದ ವಿವಾದ ಇದೀಗ ವೈಯಕ್ತಿಕ ಹೇಳಿಕೆ ನೀಡುವವರೆಗೂ ಬಂದು ನಿಂತಿದೆ. ಇಂದು ಬೆಂಗಳೂರಿನಲ್ಲಿ ಕೆಆರ್ಎಸ್ ಡ್ಯಾಂ ವಿಚಾರವಾಗಿ ಸಂಸದೆ ಸುಮಲತಾ ಹಾಗೂ ಹೆಚ್ಡಿಕೆ ನಡುವಿನ ಸಂಘರ್ಷದ ವಿಚಾರವಾಗಿ ಮಾತನಾಡಿದ ಗೃಹ ಸಚಿವ ಬೊಮ್ಮಾಯಿ ನಮ್ಮ ಡ್ಯಾಂ ಸುರಕ್ಷಿತವಾಗಿದೆಯಾ ಅನ್ನೋದಷ್ಟೇ ಮುಖ್ಯ ಎಂದು ಹೇಳಿದ್ರು.
ಸಂಸದೆ ಸುಮಲತಾ ಅಂಬರೀಶ್ ಹಾಗೂ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ನಡುವೆ ನಡೆಯುತ್ತಿರುವ ವೈಯಕ್ತಿಕ ಹೇಳಿಕೆಗಳ ವಿಚಾರವಾಗಿ ನಾನು ಏನನ್ನೂ ಹೇಳಲಾರೆ. ನಮಗೆ ಡ್ಯಾಂ ಸುರಕ್ಷಿತವಾಗಿರೋದಷ್ಟೇ ಮುಖ್ಯ. ಇದಕ್ಕೆ ಟೆಕ್ನಿಕಲ್ ಟೀಂ ವರದಿ ನೀಡಬೇಕು. ಈ ಹಿಂದೆ ಕೆಆರ್ಎಸ್ ಡ್ಯಾಂನ್ನು ಪರೀಕ್ಷೆ ಮಾಡಲಾಗಿತ್ತು. ಆಗ ಡ್ಯಾಂನಲ್ಲಿ 70 ವರ್ಷ ಹಳೆಯದಾದ ಗೇಟ್ ಇದ್ದಿದ್ದರಿಂದ ನೀರು ಪೋಲಾಗುತ್ತಿತ್ತು. ಬಳಿಕ 2011ರಲ್ಲಿ ನಾವು ಹೊಸ ಗೇಟ್ನ್ನು ಹಾಕಿಸಿದ್ದೇವು. ಗೇಟ್ ಸರಿ ಮಾಡಿಸಿದ್ರೆ ಡ್ಯಾಂ ಸುರಕ್ಷಿತವಾಗಿ ಇರುತ್ತದೆ ಎಂದು ಹೇಳಿದ್ದಾರೆ.