ವಿಶ್ವದ ಅತ್ಯಂತ ಆಳವಾದ ಕೊಳ ಎನಿಸಿಕೊಂಡ ಡೀಪ್ ಡೈವ್ ದುಬೈನಲ್ಲಿ ಸಿದ್ಧಗೊಂಡಿದ್ದು, ಸಾರ್ವಜನಿಕರಿಗೆ ಶೀಘ್ರವೇ ತೆರೆದುಕೊಳ್ಳಲಿದೆ.
ದುಬೈನ ಎನ್ಎಎಸ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿರುವ ಡೀಪ್ ಡೈವ್ ದುಬೈ 196 ಅಡಿಯಷ್ಟು (60.02 ಮೀಟರ್) ಆಳ ಹೊಂದಿದೆ. ಈ ಕೊಳ ಜೂನ್ 27ರಂದು ಗಿನ್ನೆಸ್ ವಿಶ್ವದಾಖಲೆಯಲ್ಲಿ ಸೇರಿತು.
ಈ ಮೊದಲು ವಿಶ್ವದ ಆಳವಾದ ಈಜು ಕೊಳದ ದಾಖಲೆಯನ್ನು ಪೋಲೆಂಡ್‌ನ ಡೀಪ್‌ಸ್ಪಾಟ್ ಹೊಂದಿತ್ತು.
ಕಳ್ಳನಿಗೂ ಇದೆ ಕಾಳಜಿ….! ಪರ್ಸ್ ಎಗರಿಸಿ ವ್ಯಾಕ್ಸಿನೇಷನ್ ಕಾರ್ಡ್ ವಾಪಸ್ ಎಸೆದ ಭೂಪ
ಡೀಪ್ ಡೈವ್ ಪೂಲ್ ಪ್ರಸ್ತುತ ಆಹ್ವಾನಿತರಿಗಷ್ಟೇ ತೆರೆದಿದೆ, ವರ್ಷದ ಕೊನೆಯಲ್ಲಿ ಸಾರ್ವಜನಿಕರಿಗೆ ತೆರೆಯುತ್ತದೆ. ದುಬೈನ ಕ್ರೌನ್ ಪ್ರಿನ್ಸ್ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಈ ಕೊಳದ ಮೊದಲ ಸಂದರ್ಶಕರಾಗಿದ್ದು, ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ಡೀಪ್ ಡೈವ್ ದುಬೈ ಕೊಳವನ್ನು 14 ಮಿಲಿಯನ್ ಲೀಟರ್ ನೀರಿನಿಂದ ತುಂಬಿಸಬಹುದು. ನೀರಿನ ತಾಪಮಾನವನ್ನು 30 ಡಿಗ್ರಿ ಸೆಲ್ಸಿಯಸ್‌ನಲ್ಲಿ ನಿರ್ವಹಿಸಲಾಗುತ್ತದೆ.
ನೀರೊಳಗಿನ ಈ ಅದ್ಭುತ ನಗರದೊಳಗೆ ಅನೇಕ ಅಚ್ಚರಿಗಳಿವೆ. ಅತ್ಯಾಧುನಿಕ ಬೆಳಕು ಮತ್ತು ಧ್ವನಿ ವ್ಯವಸ್ಥೆಗಳಿವೆ. ನೀರೊಳಗಿನ ಫಿಲ್ಮ್ ಸ್ಟುಡಿಯೋವಾಗಿಯೂ ಬಳಸಬಹುದು.
https://www.instagram.com/p/CRBfWYZJAcd/?utm_source=ig_web_copy_link
https://www.instagram.com/p/CRGMaiGBA4L/?utm_source=ig_web_copy_link
https://www.instagram.com/p/CRBi8wWhNBC/?utm_source=ig_web_copy_link