ಮದುವೆ ಸಮಾರಂಭವೊಂದರಲ್ಲಿ ಪುರುಷರ ಗುಂಪೊಂದು ಅರಬ್ ಜಾನಪದ ನೃತ್ಯ ಮಾಡುತ್ತಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋವನ್ನ ಟ್ವಿಟರ್ನಲ್ಲಿ ಶೇರ್ ಮಾಡಲಾಗಿದ್ದು ನೆಟ್ಟಿಗರು ಫಿದಾ ಆಗಿದ್ದಾರೆ.
ಕೆನಡಾದಲ್ಲಿ ನಡೆದ ಅರಬ್ ಸಂಪ್ರದಾಯದ ಮದುವೆಯಲ್ಲಿ ಸೆರೆಹಿಡಿಯಲಾದ ದೃಶ್ಯ ಇದಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದೆ. ಈ ಮದುವೆ ಸಮಾರಂಭಕ್ಕೆ ಆಗಮಿಸಿದ್ದ ಅತಿಥಿಗಳು ಡಬ್ಕೆ ಎಂಬ ಹೆಸರಿನ ಅರಬ್ ಜಾನಪದ ಶೈಲಿಯ ನೃತ್ಯಕ್ಕೆ ಹೆಜ್ಜೆ ಹಾಕಿದ್ದಾರೆ.
ಕೆನಡಾದಲ್ಲಿರುವ ಅರಬ್ ಪ್ರಜೆಗಳು ಮದುವೆ ಸಮಾರಂಭವೊಂದರಲ್ಲಿ ಡಬ್ಕೆ ಇಲ್ಲವೇ ಡಬ್ಕಾ ಹೆಸರಿನ ನೃತ್ಯವನ್ನ ಮಾಡಿದ್ದಾರೆ ಎಂದು ಈ ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.
ಇದೊಂದು ರೀತಿಯಲ್ಲಿ ವೃತ್ತಾಕಾರದಲ್ಲಿ ನಿಂತು ಮಾಡುವ ನೃತ್ಯವಾಗಿದ್ದು, ಅರಬ್ಬರು ಸಾಮಾನ್ಯವಾಗಿ ಮದುವೆ ಇಲ್ಲವೇ ಇತರೆ ಸಮಾರಂಭಗಳಲ್ಲಿ ಪ್ರದರ್ಶನ ಮಾಡುತ್ತಾರೆ. ಯುಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣದ ಸಾಕಷ್ಟು ವೇದಿಕೆಗಳಲ್ಲಿ ಈ ವಿಡಿಯೋವನ್ನ ಶೇರ್ ಮಾಡಲಾಗಿದ್ದು ವ್ಯಾಪಕ ಮೆಚ್ಚುಗೆ ಗಳಿಸಿದೆ.
https://youtu.be/JVVqKv6npEw