alex Certify ಮಾಲೀಕನ ಪ್ರಾಣ ಕಾಪಾಡಲು ಈ ಶ್ವಾನ ಮಾಡಿದ ಕಾರ್ಯ ಕೇಳಿದ್ರೆ ಬೆರಗಾಗ್ತೀರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಲೀಕನ ಪ್ರಾಣ ಕಾಪಾಡಲು ಈ ಶ್ವಾನ ಮಾಡಿದ ಕಾರ್ಯ ಕೇಳಿದ್ರೆ ಬೆರಗಾಗ್ತೀರಿ…!

ಶ್ವಾನಗಳು ಮನುಷ್ಯನ ಉತ್ತಮ ಸ್ನೇಹಿತರು. ಈಜೋದು ಅಂದರೆ ಏನು ಅನ್ನೋದೇ ತಿಳಿದಿರದ ಶ್ವಾನವೊಂದು ನೀರಿನಲ್ಲಿ ಮುಳುಗುವಂತೆ ನಾಟಕ ಮಾಡುತ್ತಿದ್ದ ಮಾಲೀಕನ ಪ್ರಾಣ ಕಾಪಾಡಲು ನೀರಿಗೆ ಧುಮುಕಿದೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

26 ಸೆಕೆಂಡ್​ಗಳ ವಿಡಿಯೋವನ್ನ ಟ್ವಿಟರ್​ನಲ್ಲಿ ಶೇರ್​ ಮಾಡಲಾಗಿದೆ. ಈ ವಿಡಿಯೋದಲ್ಲಿ ಸಾಕಷ್ಟು ಮಂದಿ ಪೂಲ್​ನಲ್ಲಿ ಎಂಜಾಯ್​ ಮಾಡುತ್ತಿದ್ದರು. ಇದೇ ಪೂಲ್​ನಲ್ಲಿದ್ದ ವ್ಯಕ್ತಿಯೊಬ್ಬ ನೀರಿನಲ್ಲಿ ಮುಳುಗಿದಂತೆ ನಾಟಕ ಮಾಡಿದ್ದಾರೆ.

ಮಾಲೀಕ ಕಷ್ಟಪಡುತ್ತಿದ್ದಾನೆ ಎಂದು ಭಾವಿಸಿದ ಶ್ವಾನವು ತನಗೆ ಈಜಲು ಬರುತ್ತದೋ ಇಲ್ಲವೋ ಎಂಬುದನ್ನೂ ಲೆಕ್ಕಿಸದೇ ನೀರಿಗೆ ಜಿಗಿದಿದೆ.

ಶ್ವಾನವು ನೀರಿಗೆ ಜಿಗಿಯುತ್ತಿದ್ದಂತೆಯೇ ಅದರ ಮಾಲೀಕ ಶ್ವಾನವನ್ನ ಹಿಡಿದುಕೊಂಡು ಅದನ್ನ ಬಿಗಿದಪ್ಪಿಕೊಂಡಿದ್ದಾನೆ. ʼನನ್ನ ಶ್ವಾನವು ನನ್ನನ್ನ ಎಷ್ಟು ಪ್ರೀತಿ ಮಾಡುತ್ತದೆ ಎಂಬುದನ್ನ ಅರಿತುಕೊಂಡೆʼ ಎಂದು ಈ ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋ 3.5 ಲಕ್ಷಕ್ಕೂ ಅಧಿಕ ವೀವ್ಸ್ ಸಂಪಾದಿಸಿದೆ.

https://twitter.com/i/status/1411863566542467074

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...