ಭಾರತ ಹಾಕಿ ತಂಡದ ಮಾಜಿ ಆಟಗಾರ ಕೇಶವ್ ಚಂದ್ರ ದತ್ ಕೊನೆಯುಸಿರೆಳೆದಿದ್ದಾರೆ. ಕೇಶವ್ ಚಂದ್ರ ದತ್ ಹೃದಯ ಸಂಬಂಧಿ ಸಮಸ್ಯೆಯಿಂದ ನಿಧನರಾಗಿದ್ದಾರೆ ಎನ್ನಲಾಗಿದೆ. ಟೀಂ ಇಂಡಿಯಾ ಹಾಕಿ ತಂಡದ ಆಟಗಾರನಾಗಿದ್ದ ಕೇಶವಚಂದ್ರ ದತ್ 1948 ಹಾಗೂ 1952ರಲ್ಲಿ ಒಲಿಂಪಿಕ್ ಪಂದ್ಯದಲ್ಲಿ ಹಾಕಿ ತಂಡ ಚಿನ್ನದ ಪದಕ ಸಂಪಾದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಳೆದ ಕೆಲ ಸಮಯಗಳಿಂದ ಇವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಕೇಶವ್ ದತ್ತ ನಿಧನದ ವಾರ್ತೆ ಕೇಳಿ ನಾವೆಲ್ಲ ದುಃಖದ ಸಾಗರದಲ್ಲಿ ಮುಳುಗಿದ್ದೇವೆ. 1948 ಹಾಗೂ 1952ರ ಒಲಿಂಪಿಕ್ ಪಂದ್ಯಾವಳಿಯಲ್ಲಿ ಇವರು ಮಹತ್ವದ ಪಾತ್ರ ವಹಿಸಿದ್ದರು. ಇಂದು ಕೇಶವ್ರ ನಿಧನದ ವಾರ್ತೆ ಕೇಳಿದ ಬಳಿಕ ಒಂದು ಯುಗದ ಅಂತ್ಯವಾದಂತೆ ಭಾಸವಾಗುತ್ತಿದೆ ಎಂದು ಹಾಕಿ ಇಂಡಿಯಾ ಅಧ್ಯಕ್ಷ ಜ್ಞಾನೇಂದ್ರೋ ನಿಂಗೋಂಬಮ್ ಹೇಳಿದ್ದಾರೆ.
ಟೀಂ ಇಂಡಿಯಾ ಹಾಕಿ ತಂಡ ಕೂಡ ಶ್ರೇಷ್ಟ ಆಟಗಾರನ ನಿಧನದ ವಾರ್ತೆ ಕೇಳಿ ಕಂಬನಿ ಮಿಡಿದಿದೆ.