ಇಂಡಿಯನ್ ಫಿಟ್ನೆಸ್ ಅಪ್ಲಿಕೇಶನ್ಗಳಲ್ಲಿ ಒಂದಾಗಿರುವ ಹೆಲ್ತಿಫೈ ಮಿ ಯು ಕೊರೊನಾ ಲಸಿಕೆ ಬುಕ್ಕಿಂಗ್ ಮಾಡುವ ಸೌಲಭ್ಯವನ್ನ ಅನಾವರಣಗೊಳಿಸಿದೆ. ಕೊವಿನ್ ಜೊತೆಯಲ್ಲಿ ಈ ಕಂಪನಿಯು ಅಪ್ಲಿಕೇಶನ್ ಸರ್ವೀಸ್ ಪ್ರೋವೈಡರ್ ಆಗಿ ನೋಂದಣಿ ಮಾಡಿಕೊಂಡಿದೆ.
ಹೆಲ್ತಿಫೈ ಮಿ 10 ಭಾಷೆಗಳಲ್ಲಿ ಲಸಿಕೆ ಸೌಲಭ್ಯವನ್ನ ನೀಡುತ್ತಿದೆ. ಈಗಾಗಲೇ 8 ಮಿಲಿಯನ್ಗೂ ಅಧಿಕ ಮಂದಿ ಈ ಅಪ್ಲಿಕೇಶನ್ ಸಹಾಯವನ್ನ ಪಡೆದುಕೊಂಡಿದ್ದಾರೆ.
ಹೆಲ್ತಿ ಫೈ ಮಿಯಲ್ಲಿ ಲಸಿಕೆಗೆ ನೋಂದಣಿ ಮಾಡಿಕೊಳ್ಳಲು ನೀವು ಮೊದಲು ಅಪ್ಲಿಕೇಶನ್ನ್ನು ಡೌನ್ಲೋಡ್ ಮಾಡಬೇಕು. ಇದಾದ ಬಳಿಕ ಅಪ್ಲಿಕೇಶನ್ನಲ್ಲಿ ವ್ಯಾಕ್ಸಿನೇಟ್ ಮಿ ವಿಭಾಗಕ್ಕೆ ಹೋಗಿ. ಅಲ್ಲಿ ನಿಮ್ಮ ಅಂಚೆ ಪಿನ್ನ್ನು ನಮೂದಿಸುವ ಮೂಲಕ ಲಸಿಕಾ ಕೇಂದ್ರಗಳನ್ನ ಪತ್ತೆ ಮಾಡಬಹುದಾಗಿದೆ.
ಹೆಲ್ತಿ ಫೈ ಮಿ ಮುಂದಿನ ಮೂರು ತಿಂಗಳಿನಲ್ಲಿ 10 ಮಿಲಿಯನ್ಗೂ ಅಧಿಕ ಸ್ಲಾಟ್ಗಳನ್ನ ಬುಕ್ ಮಾಡುವ ಗುರಿಯನ್ನ ಹೊಂದಿದೆ. 45 ವರ್ಷದೊಳಗಿನವರಿಗೆ ಲಸಿಕೆಯ ಸ್ಲಾಟ್ಗಳ ಲಭ್ಯತೆಯನ್ನ ಕಂಡು ಹಿಡಿಯವ ಬಗ್ಗೆ ಫೈಂಡರ್ನ್ನು ಚೆನ್ನೈ ಮೂಲದ ಟೆಕ್ಕಿ ಬರ್ಟಿ ಥಾಮಸ್ ಅಭಿವೃದ್ಧಿಪಡಿಸಿದ್ದಾರೆ. ಟೆಲಿಗ್ರಾಮ್ನಲ್ಲಿ 672ಕ್ಕೂ ಚಾನೆಲ್ಗಳ ಮೂಲಕ 4.1 ಮಿಲಿಯನ್ ಚಂದಾದಾರರಿಗೆ ಲಸಿಕೆ ಬಗ್ಗೆ ಮಾಹಿತಿಯನ್ನ ನೀಡುತ್ತಾರೆ.