ಅಮೆರಿಕದಲ್ಲಿ ಇತ್ತೀಚೆಗೆ ವರದಿಯಾಗಿರುವ ಕೋವಿಡ್ ಸಾವಿನ ಪ್ರಮಾಣದಲ್ಲಿ 99 ಪ್ರತಿಶತ ಮಂದಿ ಕೊರೊನಾ ಲಸಿಕೆ ಪಡೆಯದವರೇ ಆಗಿದ್ದಾರೆ ಎಂದು ಸಾಂಕ್ರಾಮಿಕ ರೋಗಗಳ ತಜ್ಞ ಡಾ. ಆಂಥೋನಿ ಫೌಸಿ ಹೇಳಿದ್ದಾರೆ.
ಬೆರಗಾಗಿಸುತ್ತೆ 30 ವರ್ಷಗಳ ಹಿಂದಿನ ಚಿತ್ರಕ್ಕಿರುವ ಬೆಲೆ…!
ಅಮೆರಿಕಾ ಟಿವಿ ನೆಟ್ವರ್ಕ್ನಲ್ಲಿ ನಡೆದ ಸಂದರ್ಶನದಲ್ಲಿ ಡಾ. ಆಂಥೋನಿ ಈ ಹೇಳಿಕೆಯನ್ನ ನೀಡಿದ್ದಾರೆ. ಜೂನ್ ತಿಂಗಳಲ್ಲಿ ಕೊರೊನಾದಿಂದ ಸಾವಿಗೀಡಾದವರಲ್ಲಿ 99.2 ಪ್ರತಿಶತ ಮಂದಿ ಲಸಿಕೆಯನ್ನ ಪಡೆದವರಲ್ಲ ಎಂದು ಹೇಳಿದ್ರು.
ದ್ವಿತೀಯ ಪಿಯುಸಿ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್
ಡೌ. ಫೌಸಿ ಕೊರೊನಾ ಲಸಿಕೆಯ ಎರಡೂ ಡೋಸ್ಗಳನ್ನ ಸ್ವೀಕರಿಸಿದ್ದಾರೆ. ಕೊರೊನಾ ಕೇಸ್ಗಳು ಹೆಚ್ಚಾಗಿ ಲಸಿಕೆ ಅಭಿಯಾನದ ಪ್ರಮಾಣ ತಗ್ಗುತ್ತಿರುವಾಗ ಮಾಸ್ಕ್ಗಳನ್ನ ಧರಿಸೋದೇ ಉತ್ತಮ ಎಂದು ಅವರು ಹೇಳಿದ್ದಾರೆ. ಈಗ ದೇಶದಲ್ಲಿ ಉಂಟಾದ ಎಲ್ಲಾ ಸಾವುಗಳನ್ನೂ ತಡೆಗಟ್ಟಬಹುದಾಗಿತ್ತು. ಲಸಿಕೆಯನ್ನ ಪಡೆಯದ ಕಾರಣಕ್ಕೇ ಈ ರೀತಿ ಆಗಿದೆ ಎಂದು ಬೇಸರ ಹೊರಹಾಕಿದ್ರು.
ಇನ್ನು ಕೊರೊನಾ ಸೋಂಕಿನ ವಿಚಾರವಾಗಿ ಮಾತನಾಡಿದ ರೋಗ ನಿಯಂತ್ರಣ ಕೇಂದ್ರದ ನಿರ್ದೇಶಕ ಡಾ. ರೊಶೆಲ್ಲೆ ವೆಲೆನ್ಸ್ಕಿ ಕೊರೊನಾದ ಡೆಲ್ಟಾ ರೂಪಾಂತರಿ ಮೊದಲು ಭಾರತದಲ್ಲೇ ಕಂಡು ಬಂದಿದೆ. ಹಾಗೂ ಇದು ಅಮೆರಿಕದ ಎರಡನೆ ಅತಿ ಗಂಭೀರ ರೂಪಾಂತರಿ ಎಂದು ಅಂದಾಜಿಸಲಾಗಿದೆ ಅಂತಾ ಹೇಳಿದ್ರು.