ವಿದೇಶಗಳಲ್ಲಿ ನಡೆಯುವ ಪುರಾತನ ವಸ್ತುಗಳ ರೋಡ್ ಶೋ ಅನೇಕರ ಪಾಲಿಗೆ ಭಾಗ್ಯವನ್ನೇ ಬದಲಿಸುವ ಕಾರ್ಯಕ್ರಮವಾಗಿದೆ. ಮನೆಯಲ್ಲಿದ್ದ ಹಳೆಯ ವಸ್ತುಗಳು ಮಿಲಿಯನ್ ಡಾಲರ್ ಮೌಲ್ಯವನ್ನ ಹೊಂದಿದೆ ಎಂಬ ವಿಚಾರ ಗೊತ್ತಾದ್ರೆ ಯಾರಿಗ್ ತಾನೆ ಖುಷಿಯಾಗೋದಿಲ್ಲ ಹೇಳಿ..?
ಕೆಲ ದಿನಗಳ ಹಿಂದಷ್ಟೇ ಇದೇ ರೀತಿಯ ಕಾರ್ಯಕ್ರಮದಲ್ಲಿ ಮಹಿಳೆಯ ಬಳಿ ಇದ್ದ ಬಾರ್ಬಿ ಡಾಲರ್ ಒಂದು 1.54 ಲಕ್ಷ ರೂಪಾಯಿ ಮೌಲ್ಯ ಹೊಂದಿದೆ ಎಂದು ತಿಳಿದು ಆಕೆ ಶಾಕ್ ಆಗಿದ್ದಳು. ಈ ವಿಚಾರ ಸಾಮಾಜಿಕ ಜಾಲತಾಣದಲ್ಲೆಲ್ಲ ವೈರಲ್ ಆಗಿತ್ತು.
ಇದೇ ರೀತಿಯ ಇನ್ನೊಂದು ಘಟನೆ ಇದೀಗ ವೈರಲ್ ಆಗಿದೆ. ಆಂಟಿಕ್ ರೋಡ್ ಶೋನಲ್ಲಿ ಭಾಗಿಯಾಗಿದ್ದ ಮಹಿಳೆಗೆ ತನ್ನ ಬಳಿ ಇರುವ ಚಿತ್ರವೊಂದು ನಾಲ್ಕಂಕಿ ಮೌಲ್ಯ ಹೊಂದಿದೆ ಎಂದು ತಿಳಿದು ಶಾಕ್ ಆಗಿದ್ದಾಳೆ. ಕಚೇರಿಯನ್ನ ಸ್ವಚ್ಛ ಮಾಡುತ್ತಿದ್ದ ವೇಳೆ ತಾನು ಈ ಚಿತ್ರವನ್ನ ಕಂಡುಕೊಂಡೆ ಎಂದು ಈಕೆ ಕಾರ್ಯಕ್ರಮದ ನಿರೂಪಕರಿಗೆ ಹೇಳಿದ್ದಾಳೆ.
ಅಂದಹಾಗೆ ಈ ಚಿತ್ರಕ್ಕೆ ಇಷ್ಟೊಂದು ಬೆಲೆ ಬರೋಕೆ ಕಾರಣ ಕೂಡ ಇದೆ. ಈ ಚಿತ್ರವನ್ನ ಪ್ರಸಿದ್ಧ ವ್ಯಂಗ್ರಚಿತ್ರಕಾರ ಕ್ವೆಂಟಿನ್ ಬ್ಲೇಕ್ ಎಂಬವರು ಬಿಡಿಸಿದ್ದಾರೆ. ಈಕೆ ಪುಸ್ತಕಗಳ ರಾಶಿಯಲ್ಲಿ ಈ ಚಿತ್ರಕಲೆಯನ್ನ ನೋಡಿದ್ದಾಗಿ ಹೇಳಿದ್ದಾಳೆ. ಇದು ಸರಿಸುಮಾರು 30 ವರ್ಷದ ಹಿಂದಿನ ಚಿತ್ರಕಲೆಯಾಗಿದ್ದು ಇದರ ಪ್ರಸ್ತುತ ಬೆಲೆ 1.54 ಲಕ್ಷ ರೂಪಾಯಿ ಆಗಿದೆ.