ನಿಮ್ಮ ದೂರವಾಣಿ ಸಂಖ್ಯೆ, ವಿಳಾಸ ಸೇರಿದಂತೆ ಆಧಾರ್ ಕಾರ್ಡ್ ಸದಾ ಅಪ್ಡೇಟ್ ಆಗಿರುವುದನ್ನು ಖಾತ್ರಿ ಮಾಡಿಕೊಳ್ಳುವುದು ಬಹಳ ಮುಖ್ಯವಾದ ಕೆಲಸಗಳಲ್ಲಿ ಒಂದು. ನಮ್ಮ ಬ್ಯಾಂಕ್ ಖಾತೆಗಳು, ವಾಹನ ನೋಂದಣಿ, ವಿದ್ಯುತ್ ಸಂಪರ್ಕ ಸೇರಿದಂತೆ ಬಹಳಷ್ಟು ಸೌಲಭ್ಯಗಳನ್ನು ಆಧಾರ್ ಸಂಖ್ಯೆ ಮೂಲಕವೇ ಪಡೆಯುವ ಕಾರಣ ಈ ಅಪ್ಡೇಟ್ ಬಹಳ ಮುಖ್ಯವಾಗಿದೆ.
ಈ ನಿಟ್ಟಿನಲ್ಲಿ ತನ್ನ ಆನ್ಲೈನ್ ಪೋರ್ಟಲ್ ಅನ್ನು ಬಳಕೆದಾರ ಸ್ನೇಹಿಯಾಗಿ ಮಾಡಿರುವ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ತನ್ನ ಎಂಆಧಾರ್ ಅಪ್ಲಿಕೇಶನ್ ಅನ್ನು ಮೇಲ್ದರ್ಜೆಗೇರಿಸಿದ್ದು, ಆಧಾರ್ ಸಂಬಂಧಿ 35 ಸೇವೆಗಳನ್ನು ಹೆಚ್ಚುವರಿಯಾಗಿ ಮೊಬೈಲ್ ಮೂಲಕವೇ ದೊರಕುವಂತೆ ಮಾಡಿದೆ.
ಮಂಡ್ಯ ಜಿಲ್ಲೆ ಶಾಸಕರೊಂದಿಗೆ ಸಿಎಂ ಜೊತೆ ಹೆಚ್.ಡಿ.ಕೆ. ಭೇಟಿ: ತೀವ್ರ ಕುತೂಹಲ ಕೆರಳಿಸಿದ ಉಭಯ ನಾಯಕರ ನಡೆ ನಡೆ
ಈ ಅಪ್ಲಿಕೇಶನ್ಅನ್ನು ಗೂಗಲ್ ಪ್ಲೇ ಸ್ಟೋರ್ ಹಾಗೂ ಐಓಎಸ್ ಆಪಲ್ ಸ್ಟೋರ್ನಲ್ಲಿ ಡೌನ್ಲೋಡ್ ಮಾಡಬಹುದಾಗಿದೆ.
ಅಪ್ಲಿಕೇಶನ್ ಹೊಸ ಹಾಗೂ ಮುಖ್ಯ ಫೀಚರ್ಗಳು ಇಂತಿವೆ.
1. ಕನ್ನಡ ಸೇರಿದಂತೆ ದೇಶದ 13 ಪ್ರಾದೇಶಿಕ ಭಾಷೆಯಲ್ಲಿ ಬಳಕೆದಾರರ ಇಂಟರ್ಫೇಸ್ ಇರಲಿದ್ದು, ಸೌಲಭ್ಯಗಳನ್ನು ಪಡೆಯುವುದು ಬಳಕೆದಾರರಿಗೆ ಇನ್ನಷ್ಟು ಸಲೀಸಾಗಿದೆ.
2. ನಿಮ್ಮ ಬಳಿ ಆಧಾರ್ ಕಾರ್ಡ್ ಇದೆಯೋ ಇಲ್ಲವೋ ಎಂಬುದನ್ನು ಮೀರಿ ನೀವು ಈ ಅಪ್ಲಿಕೇಶನ್ ಬಳಸಬಹುದಾಗಿದೆ. ಆದರೆ ಈ ಅಪ್ಲಿಕೇಶನ್ ಮೂಲಕ ಆಧಾರ್ ಸೇವೆಗಳನ್ನು ಪಡೆಯಲು ಆಧಾರ್ ನೋಂದಾಯಿತ ಪ್ರೊಫೈಲ್ ಇರಬೇಕು.
3. ಎಂಆಧಾರ್ ಅಪ್ಲಿಕೇಶನ್ ಮೂಲಕ ಸಿಗುವ ಸೇವೆಗಳನ್ನು ಮೂರು ಭಾಗಗಳನ್ನಾಗಿ ಮಾಡಲಾಗಿದೆ — ’ಮುಖ್ಯ ಸೇವೆಗಳ ಡ್ಯಾಶ್ಬೋರ್ಡ್’, ’ಸ್ಟೇಟಸ್ ಸೇವೆಗಳ ವಿನಂತಿ’, ’ನನ್ನ ಆಧಾರ್ ವಿಭಾಗ’.
’ಮುಖ್ಯ ಸೇವೆಗಳ ಡ್ಯಾಶ್ಬೋರ್ಡ್’ ಮೂಲಕ ಆಧಾರ್ ಕಾರ್ಡ್ ಡೌನ್ಲೋಡ್, ಮರುಮುದ್ರಣ, ವಿಳಾಸ/ದೂರವಾಣಿ ವಿವರಗಳ ಪರಿಷ್ಕರಣೆ, ಆಫ್ಲೈನ್ ಇಕೆವೈಸಿ ಡೌನ್ಲೋಡ್, ಕ್ಯೂಆರ್ ಕೋಡ್ ಸ್ಕ್ಯಾನಿಂಗ್, ಆಧಾರ್ ಪರಿಶೀಲನೆ ಸೇರಿದಂತೆ ಇನ್ನೂ ಅನೇಕ ಕೆಲಸಗಳನ್ನು ಮಾಡಿಕೊಳ್ಳಲು ನೇರ ವ್ಯವಸ್ಥೆ ಇದೆ.
ಕೋವಿಡ್ ಕಾಲದ ಆರ್ಥಿಕ ಸಂಕಷ್ಟ ಎದುರಿಸಲು ಇಲ್ಲಿವೆ ಟಿಪ್ಸ್
’ಸೇವೆಗಳ ಸ್ಟೇಟಸ್ ವಿನಂತಿ’ ಮೂಲಕ ಆಧಾರ್ ಹಾಗೂ ಇತರೆ ಆನ್ಲೈನ್ ಸೇವೆಗಳ ಕೋರಿಕೆಯ ವಿನಂತಿಯ ಸ್ಟೇಟಸ್ ಪರಿಶೀಲನೆ ಮಾಡಿಕೊಳ್ಳಬಹುದಾಗಿದೆ.
ಹೆಚ್ಚುವರಿಯಾಗಿ, ’ನೋಂದಣಿ ಕೇಂದ್ರದ ಆಯ್ಕೆ’ ಮೂಲಕ ನಿಮ್ಮ ಹತ್ತಿರದಲ್ಲಿರುವ ಆಧಾರ್ ನೋಂದಣಿ ಕೇಂದ್ರವನ್ನು ಕಂಡುಕೊಳ್ಳಬಹುದಾಗಿದೆ.
4. ಬಳಕೆದಾರರು ಕ್ಯೂಆರ್ ಕೋಡ್ ಹಾಗೂ ಪಾಸ್ವರ್ಡ್ ರಕ್ಷಿತ ಇಕೆವೈಸಿ ತೋರುವ ಮೂಲಕ ಕಾಗದ ರಹಿತ ಖಾತ್ರಿಗಳನ್ನು ಮಾಡಿಕೊಳ್ಳಬಹುದಾಗಿದೆ.
5. ಸಮಯಾಧರಿತ ಒನ್-ಟೈಂ-ಪಾಸ್ವರ್ಡ್ (ಓಟಿಪಿ) ಮೂಲಕ ಈ ಅಪ್ಲಿಕೇಶನ್ ಇನ್ನಷ್ಟು ಸುರಕ್ಷಿತವಾಗಿದೆ.
6. ಬಳಕೆದಾರರು ತಮಗಾಗಿ ವರ್ಚುವಲ್ ಐಡಿ ಸೃಷ್ಟಿಸಿಕೊಂಡು, ಅಪ್ಲಿಕೇಶನ್ನಲ್ಲಿರುವ ಪ್ರೊಫೈಲ್ ಸೆಕ್ಷನ್ನಲ್ಲಿ ಏಕಕಾಲದಲ್ಲಿ ಮೂರು ಪ್ರೊಫೈಲ್ಗಳನ್ನು ನಿರ್ವಹಿಸಬಹುದು.