ಅಬುಧಾಬಿ: ಯುಎಇನಲ್ಲಿ ದುಡಿಯಲು ಹೋಗಿದ್ದ ಕೇರಳದ ಚಾಲಕನೊಬ್ಬನಿಗೆ ಜಾಕ್ ಪಾಟ್ ಹೊಡೆದಿದೆ. ಲಾಟರಿಯಲ್ಲಿ ಬರೋಬ್ಬರಿ 40 ಕೋಟಿ ರೂಪಾಯಿ ಬಹುಮಾನ ಬಂದಿದೆ.
ದುಬೈನಲ್ಲಿ ಟ್ಯಾಕ್ಸಿ ಹಾಗೂ ವಿವಿಧ ವಾಹನ ಚಾಲಕರಾಗಿ ಕೆಲಸ ಮಾಡುತ್ತಿರುವ ರಂಜಿತ್ ಸೋಮರಾಜನ್ ಮತ್ತು ಅವರ 9 ಸಹಚರರು 40 ಕೋಟಿ ರೂಪಾಯಿ ಬಹುಮಾನ ಗೆದ್ದಿದ್ದಾರೆ. ಕಳೆದ ಮೂರು ವರ್ಷಗಳಿಂದ ಲಾಟರಿ ಟಿಕೆಟ್ ಖರೀದಿಸುತ್ತಿದ್ದ ರಂಜಿತ್ ಈ ಬಾರಿ ತಮ್ಮ 9 ಸಹಚರರೊಂದಿಗೆ ಲಾಟರಿ ಖರೀದಿಸಿದ್ರು. ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಹೊರಬಂದ ನಂತರ ಅವರ ಅದೃಷ್ಟ ಖುಲಾಯಿಸಿದ ಮಾಹಿತಿ ಸಿಕ್ಕಿದೆ.
ಲಾಟರಿಯಲ್ಲಿ ಬರೋಬ್ಬರಿ 40 ಕೋಟಿ ರೂಪಾಯಿ ಬಹುಮಾನ ಬಂದಿದೆ. 9 ಮಂದಿಗೆ ತಲಾ 4 ಕೋಟಿ ರೂಪಾಯಿ ಬಹುಮಾನ ಸಿಗಲಿದೆ.