ಫೆಬ್ರವರಿ – ಮಾರ್ಚ್ ತಿಂಗಳ ಅವಧಿಗೆ ಹೋಲಿಕೆ ಮಾಡಿದ್ರೆ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಟ್ವಿಟರ್ನಲ್ಲಿ ಕೋವಿಡ್ 19ಗೆ ಸಂಬಂಧಿಸಿದ ಟ್ವೀಟ್ಗಳ ಸಂಖ್ಯೆ 600 ಪ್ರತಿಶತ ಅಧಿಕವಾಗಿದೆ. ಅಲ್ಲದೇ ವೈದ್ಯಕೀಯ ಸಹಾಯಕ್ಕಾಗಿ ಅಂಗಲಾಚಿ ಮಾಡಲಾದ ಟ್ವೀಟ್ಗಳ ಸಂಖ್ಯೆ 1958 ಪ್ರತಿಶತ ಅಧಿಕವಾಗಿದೆ ಎಂಬುದು ದತ್ತಾಂಶಗಳ ಮೂಲಕ ತಿಳಿದು ಬಂದಿದೆ.
ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಕೊರೊನಾ 2ನೇ ಅಲೆಯ ಪ್ರಭಾವ ಗಂಭೀರವಾಗಿತ್ತು. ಈ ಸಮಯದಲ್ಲಿ ಆಸ್ಪತ್ರೆಗಳಲ್ಲಿ ಸರಿಯಾದ ಸಮಯಕ್ಕೆ ಬೆಡ್ ಸಿಗುತ್ತಿರಲಿಲ್ಲ, ಆಕ್ಸಿಜನ್ ಅಭಾವ, ರೆಮ್ಡೆಸಿವರ್ಗೆ ಹೆಚ್ಚಿದ ಬೇಡಿಕೆ, ಆಮ್ಲಜನಕ ಸಾಂದ್ರಕಗಳಿಗಾಗಿ ಹುಡುಕಾಟ ಹೀಗೆ ಸಾಕಷ್ಟು ವಿಚಾರಗಳಿಂದ ಜನತೆ ತತ್ತರಿಸಿ ಹೋಗಿದ್ದರು. ಈ ಕಷ್ಟದ ಸಂದರ್ಭದಲ್ಲಿ ಅನೇಕರು ಟ್ವಿಟರ್ನಲ್ಲಿ ಸಹಾಯಕ್ಕಾಗಿ ಅಂಗಲಾಚಿಸಿದ್ದರು.
ಏಕಾಏಕಿ ಮನೆಗೆ ನುಗ್ಗಿದ ಟ್ರಕ್: ಭೀಕರ ಅಪಘಾತದಲ್ಲಿ ಐವರು ಮಕ್ಕಳ ಸಾವು
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ #Covid19 ಎಂಬ ಹ್ಯಾಶ್ಟ್ಯಾಗ್ನ್ನು 77 ಪ್ರತಿಶತಕ್ಕಿಂತಲೂ ಅಧಿಕ ಬಾರಿ ಬಳಕೆ ಮಾಡಲಾಗಿದೆ. ಅದೇ ರೀತಿ #Blood ಶೇಕಡಾ 72, #SOS ಶೇಕಡಾ 152ಕ್ಕಿಂತಲೂ ಅಧಿಕ ಬಾರಿ ಬಳಕೆ ಮಾಡಿದ್ದಾರೆ. ಇನ್ನು ಆಸ್ಟ್ರೇಲಿಯಾ ಆಟಗಾರ ಕ್ಯೂಮಿನ್ಸ್ ಭಾರತಕ್ಕೆ ಆರ್ಥಿಕ ನೆರವು ನೀಡುವ ಬಗ್ಗೆ ಮಾಡಿದ ಟ್ವೀಟ್ ಈ ಅವಧಿಯಲ್ಲಿ ಅತೀ ಹೆಚ್ಚು ಲೈಕ್ ಹಾಗೂ ರಿಟ್ವೀಟ್ ಮಾಡಲಾದ ಟ್ವೀಟ್ ಆಗಿದೆ.