ಶ್ರೀಸಾಮಾನ್ಯರಿಗೆ ಭಾರತೀಯ ಜೀವ ವಿಮಾ ನಿಗಮವು ಸಿಹಿ ಸುದ್ದಿಯೊಂದನ್ನ ನೀಡಿದೆ. ಎಲ್ಐಸಿ ಕಂಪನಿಯು ಸರಳ ಪಿಂಚಣಿ ಎಂಬ ಹೊಸ ಯೋಜನೆಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ಈ ಹೊಸ ಯೋಜನೆಯು ಜೋಡಣೆ ಆಗದ, ನಾನ್ ಪಾರ್ಟಿಸಿಪೇಟಿಂಗ್, ಸಿಂಗಲ್ ಪ್ರೀಮಿಯಂ, ವೈಯಕ್ತಿಕ ಆನ್ಯುಯಿಟಿ ಪ್ಲಾನ್ ಆಗಿದೆ. ಎಲ್ಐಸಿ ಪರಿಚಯಿಸಿರುವ ಈ ಸರಳ ಪಿಂಚಣಿ ಯೋಜನೆಯು ಜುಲೈ 1ರಿಂದ ಚಾಲ್ತಿಗೆ ಬಂದಿದೆ. 40 ರಿಂದ 80 ವರ್ಷದೊಳಗಿನವರು ಈ ಯೋಜನೆಗೆ ಸೇರ್ಪಡೆಯಾಗಬಹುದಾಗಿದೆ.
ಈ ಹೊಸ ಯೋಜನೆಯ ಬಗ್ಗೆ ಎಲ್ಐಸಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿದೆ. ಈ ಪತ್ರಿಕಾ ಪ್ರಕಟಣೆಯಲ್ಲಿ ಎಲ್ಐಸಿ ಕಂಪನಿಯು ಇನ್ಷೂರೆನ್ಸ್ ರೆಗ್ಯುಲೇಟರಿ ಅಂಡ್ ಡೆವಲಪ್ಮೆಂಟ್ ಅಥಾರಿಟಿ ಆಫ್ ಇಂಡಿಯಾದ ಮಾರ್ಗಸೂಚಿಯ ಅನ್ವಯ ವಾರ್ಷಿಕ ಯೋಜನೆಯ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದೆ.
ಈ ಪಾಲಿಸಿಯನ್ನ ಹೊಂದಿರುವ ವ್ಯಕ್ತಿ ಲಂಪ್ಸಮ್ ಮೊತ್ತ ಪಾವತಿಯನ್ನ ಎರಡು ಆಯ್ಕೆಗಳ ಪೈಕಿ ಒಂದನ್ನ ಆಯ್ಕೆ ಮಾಡಿಕೊಂಡು ಪಾವತಿ ಮಾಡಬಹುದಾಗಿದೆ.
ಲೈಫ್ ಆನ್ಯುಯಿಟಿ ಜೊತೆಗೆ ಖರೀದಿ ದರದ 100 ಪ್ರತಿಶತ ವಾಪಸ್ಸಾತಿ ಹಾಗೂ ಜಂಟಿ ಲೈಫ್ ಅಂದರೆ ಕೊನೆಯ ಪಾಲಿಸಿ ಖರೀದಿದಾರ ಬದುಕಿರುವವರೆಗೂ ಆನ್ಯೂಯಿಟಿ .
ಖರೀದಿ ಮೊತ್ತದ ರಿರ್ಟನ್ಸ್ನ್ನು ಕೊನೆಯ ವ್ಯಕ್ತಿ ತನ್ನ ಜೀವಿತಾವಧಿಯ ಕೊನೆಯವರೆಗೂ ಆಫ್ಲೈನ್ ಇಲ್ಲವೇ ಆನ್ಲೈನ್ ಮೂಲಕ ಖರೀದಿ ಮಾಡಬಹುದಾಗಿದೆ. ಈ ಪಾಲಿಸಿಯನ್ನ ಹೊಂದಬೇಕು ಎಂದು ಬಯಸಿದವರು ಆಫ್ಲೈನ್ ಇಲ್ಲವೇ ನೇರವಾಗಿ ಎಲ್ಐಸಿ ಅಧಿಕೃತ ವೆಬ್ಸೈಟ್ನಲ್ಲಿ ಖರೀದಿ ಮಾಡಬಹುದಾಗಿದೆ. ಪಾಲಿಸಿ ಪ್ರಾರಂಭಿಸಿದ ಆರು ತಿಂಗಳ ಬಳಿಕ ಸಾಲ ಸೌಲಭ್ಯ ಲಭ್ಯವಿರಲಿದೆ.