ಟಿಕ್ಟಾಕ್ನ ವೇದಿಕೆಯಲ್ಲಿ ಮಾಡಲಾಗುವ ವಿಡಿಯೋ ಅವಧಿ ಹೆಚ್ಚಿಸಲು ಮುಂದಿನ ಕೆಲ ವಾರಗಳಲ್ಲೇ ಅನುಮತಿ ನೀಡೋದಾಗಿ ಕಂಪನಿಯು ಹೇಳಿದೆ. ಈ ಹೊಸ ಸೌಲಭ್ಯದ ಬಳಿಕ ಟಿಕ್ಟಾಕ್ ವಿಡಿಯೋಗಳನ್ನ 3 ನಿಮಿಷಗಳ ಕಾಲ ಮಾಡಬಹುದಾಗಿದೆ.
ಟಿಕ್ಟಾಕ್ನಲ್ಲಿ ಈವರೆಗೆ 60 ಸೆಕೆಂಡ್ಗಳವರೆಗೆ ಮಾತ್ರ ವಿಡಿಯೋಗಳನ್ನ ಮಾಡಲು ಅವಕಾಶವಿದೆ. ಈ ವಿಡಿಯೋಗಳನ್ನ ಎಡಿಟ್ ಮಾಡಲು ಅದಕ್ಕೆ ಹಾಡನ್ನ ಸೇರಿಸಲು ಹೀಗೆ ಎಲ್ಲಾ ಅವಕಾಶಗಳು ಈ ಅಪ್ಲಿಕೇಶನ್ನಲ್ಲಿಯೇ ಸಿಗುತ್ತದೆ. ಕಳೆದ ಕೆಲ ವರ್ಷಗಳಲ್ಲಿ ಈ ಅಪ್ಲಿಕೇಶನ್ ಯುವ ಜನಾಂಗದವರ ಪಾಲಿಗೆ ಹಾಟ್ ಫೇವರಿಟ್ ಆಗಿ ಬದಲಾಗಿತ್ತು.
ಮುಂಬರುವ ವಾರಗಳಲ್ಲಿ ಟಿಕ್ಟಾಕ್ನಲ್ಲಿ ಹೆಚ್ಚಿನ ಅವಧಿಯ ವಿಡಿಯೋಗಳನ್ನ ಪೋಸ್ಟ್ ಮಾಡಲು ಎಲ್ಲರಿಗೂ ಅವಕಾಶ ನೀಡಲಾಗುತ್ತೆ. ಈ ಮೂಲಕ ನೀವು ಮೂರು ನಿಮಿಷಗಳ ಅವಧಿಯವರೆಗೆ ವಿಡಿಯೋಗಳನ್ನ ಮಾಡಬಹುದಾಗಿದೆ ಎಂದು ಟಿಕ್ಟಾಕ್ ಕಂಪನಿ ಹೇಳಿದೆ.
ಚೀನಾ ಮೂಲದ ಕಂಪನಿಯು ನಿರ್ಮಾಣ ಮಾಡಿರುವ ಈ ಟಿಕ್ಟಾಕ್ ಅಪ್ಲಿಕೇಶನ್ ಸೋಶಿಯಲ್ ಮೀಡಿಯಾದಲ್ಲಿ ಅತ್ಯಂತ ಪ್ರಚಲಿತವಾಗಿತ್ತು. ಬಳಿಕ ಭಾರತದಲ್ಲಿ ಈ ಅಪ್ಲಿಕೇಶನ್ನ್ನು ರದ್ದು ಮಾಡಲಾಗಿದೆ. ಆದರೆ ಅಮೆರಿಕದಲ್ಲಿ ಈ ಅಪ್ಲಿಕೇಶನ್ ಬಳಕೆಗೆ ಮತ್ತೆ ಅವಕಾಶ ಕಲ್ಪಿಸಿದ ಬಳಿಕ ಭಾರತದ ಜೊತೆಗೂ ಮಾತುಕತೆಗೆ ಚೀನಾ ಮೂಲದ ಕಂಪನಿ ಮುಂದಾಗಿದೆ ಎನ್ನಲಾಗಿದೆ.