
ಏಪ್ರಿಲ್ ತಿಂಗಳಿನಲ್ಲಿ ಅಡಿಲೇಡ್ನ ಸೆಸೇಮ್ ಬೀದಿ ಸರ್ಕಸ್ನಲ್ಲಿ ಬರೋಬ್ಬರಿ 1,60,000 ಡಾಲರ್ ಮೌಲ್ಯದ ಹಕ್ಕಿ ಮಾದರಿಯ ಉಡುಪು ಕಾಣೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ಶೋಧ ಕಾರ್ಯವನ್ನ ಚುರುಕುಗೊಳಿಸಿದ್ರು ಹಾಗೂ ಕೇವಲ ಒಂದು ದಿನದಲ್ಲಿ ಈ ಉಡುಪನ್ನ ಪತ್ತೆ ಮಾಡಿದ್ದಾರೆ. ಆದರೆ ಈ ಉಡುಪಿನ ಜೊತೆಯಲ್ಲಿ ಟಿಪ್ಪಣಿ ಕೂಡ ಸಿಕ್ಕಿದೆ.
ಈ ಟಿಪ್ಪಣಿಯಲ್ಲಿ ನಾವು ಏನು ಮಾಡುತ್ತಿದ್ದೇವೆ ಹಾಗೂ ಇದರಿಂದ ಯಾವ ಪರಿಣಾಮ ಉಂಟಾಗಬಹುದು ಎಂಬುದರ ಐಡಿಯಾ ನಮಗಿಲ್ಲ ಎಂದು ಬರೆಯಲಾಗಿತ್ತು.
ನಾವು ಕಠಿಣ ಪರಿಸ್ಥಿತಿಯಲ್ಲಿ ಇದ್ದೇವೆ. ಹೀಗಾಗಿ ನಮ್ಮನ್ನ ನಾವು ಹುರಿದುಂಬಿಸಿಕೊಳ್ಳುವ ಯತ್ನದಲ್ಲಿದ್ದೇವೆ. ಮಿ. ಬರ್ಡ್ ಜೊತೆ ನಾವು ಗುಣಮಟ್ಟದ ಸಮಯವನ್ನ ಕಳೆದಿದ್ದೇವೆ. ಅಲ್ಲದೇ ನಮ್ಮ ಈ ಹೊಸ ಗೆಳೆಯನಿಗೆ ಯಾವುದೇ ತೊಂದರೆ ಮಾಡಿಲ್ಲ ಎಂದು ಬರೆಯಲಾಗಿದೆ.
ರಾಷ್ಟ್ರವ್ಯಾಪಿ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಜೂನ್ 30ರಂದು ಕೋರ್ಟ್ ಎದುರು ಇಬ್ಬರು ಪುರುಷರು ಹಾಜರಾಗಿದ್ದಾರೆ. ವಿಚಾರಣೆ ಬಳಿಕ ಇಬ್ಬರೂ, ಪತ್ರಕರ್ತರಿಗೆ ಯಾವುದೇ ಹೇಳಿಕೆ ನೀಡೋದನ್ನ ನಿರಾಕರಿಸಿ ಪೊಲೀಸ್ ವಾಹನ ಏರಿದ್ದಾರೆ. ಮುಂದಿನ ವಿಚಾರಣೆ ನವೆಂಬರ್ ತಿಂಗಳಲ್ಲಿ ನಡೆಯಲಿದೆ.