ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಸುಮಾರು 140 ಬಿಲಿಯನ್ ಡಾಲರ್ಗೂ ಅಧಿಕ ಮೌಲ್ಯದ ಆಸ್ತಿಯನ್ನ ಬಿಲ್ಗೇಟ್ಸ್ ಹೊಂದಿದ್ದಾರೆ. ಬಿಲ್ ಗೇಟ್ಸ್ ಹಾಗೂ ಮಿಲಿಂದಾ ಗೇಟ್ಸ್ ವಿಶ್ವಾದ್ಯಂತ ಅನೇಕ ಕಡೆಗಳಲ್ಲಿ ಕಂಪನಿ, ಹೋಟೆಲ್ ಹಾಗೂ ಜಾಗಗಳನ್ನ ಹೊಂದಿದ್ದಾರೆ.
ಬಿಲ್ ಗೇಟ್ಸ್ ಹಾಗೂ ಮಿಲಿಂದಾ ದಂಪತಿಯ ವಿಚ್ಛೇದನ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಅನೇಕರು ಇವರ ಆಸ್ತಿ ಹೇಗೆ ವಿಭಜನೆ ಆಗಬಹುದು ಎಂಬುದನ್ನೇ ತಲೆಕೆಡಿಸಿಕೊಂಡಿದ್ದಾರೆ. ಕೆಲವು ವರದಿಗಳ ಪ್ರಕಾರ ಮಿಲಿಂದಾ ಗೇಟ್ಸ್ ಬಿಲ್ ಗೇಟ್ಸ್ ಜೊತೆ ಕೆಲ ಪೂರ್ವಭಾವಿ ಒಪ್ಪಂದಗಳಿಗೆ ಸಹಿ ಹಾಕಿಲ್ಲ ಎಂದು ಹೇಳಲಾಗ್ತಿದೆ.
ಬಿಲ್ ಗೇಟ್ಸ್ರ ಪ್ರಮುಖ ಆಸ್ತಿಗಳಲ್ಲಿ ಒಂದು ಅಮೆರಿಕದ ಬೆಲೀಜ್ ಖಾಸಗಿ ದ್ವೀಪವಾಗಿದೆ. ಗ್ರ್ಯಾಂಡ್ ಬೊಗ್ ಕಯ್ ಎಂಬ ಹೆಸರಿನ ಈ ದ್ವೀಪವು ಸರಿ ಸುಮಾರು 314 ಎಕರೆ ವ್ಯಾಪ್ತಿಯದ್ದಾಗಿದೆ. ಈ ಅತೀ ಸುಂದರ ದ್ವೀಪವನ್ನ ಬಿಲ್ ಗೇಟ್ಸ್ 2006ರಲ್ಲೇ ಖರೀದಿ ಮಾಡಿದ್ದರು. 2006ರಲ್ಲಿ ಈ ಆಸ್ತಿಯನ್ನ ಬಿಲ್ ಗೇಟ್ಸ್ 1,38,09,16,389 ರೂಪಾಯಿಗಳಿಗೆ ಖರೀದಿ ಮಾಡಿದ್ದರು. ಆದರೆ ಪ್ರಸ್ತುತ ಈ ಆಸ್ತಿ ಮೌಲ್ಯವು 1,86,70,09,239.92 ರೂಪಾಯಿ ಆಗಿದೆ.