ಆಧಾರ್ ಕಾರ್ಡ್ ಗೆ ಆನ್ಲೈನ್ ಡೌನ್ಲೋಡ್ ಗೆ ಸಂಬಂಧಿಸಿದಂತೆ ನವೀಕರಣವೊಂದನ್ನು ಮಾಡಲಾಗಿದೆ. ಇನ್ಮುಂದೆ ಆನ್ಲೈನ್ ಆಧಾರ್ ಡೌನ್ಲೋಡ್ ಮತ್ತಷ್ಟು ಸುಲಭವಾಗಲಿದೆ. ಯುಐಡಿಎಐ ಈ ಬಗ್ಗೆ ಮಾಹಿತಿ ನೀಡಿದೆ. ಯುಐಡಿಎಐ ಇದಕ್ಕೆ ಸಂಬಂಧಿಸಿದ ಲಿಂಕ್ ಹಂಚಿಕೊಂಡಿದೆ. eaadhaar.uidai.gov.in/ ಕ್ಲಿಕ್ ಮಾಡುವ ಮೂಲಕ ಆಧಾರ್ ಕಾರ್ಡನ್ನು ಎಲ್ಲಿ ಬೇಕಾದರೂ ಡೌನ್ಲೋಡ್ ಮಾಡಬಹುದು.
ಯುಐಡಿಎಐ ಅಧಿಕೃತ ಟ್ವಿಟರ್ ನಿಂದ ಈ ಬಗ್ಗೆ ಟ್ವೀಟ್ ಮಾಡಿದೆ. ದೇಶದಲ್ಲಿ ಅನೇಕ ಸೇವೆಗಳಿಗೆ ಆಧಾರ್ ಅನಿವಾರ್ಯವಾಗಿದೆ, ಬ್ಯಾಂಕ್ ಕೆಲಸ ಅಥವಾ ಸರ್ಕಾರಿ ಯೋಜನೆಯ ಲಾಭ ಪಡೆಯಲು ಆಧಾರ್ ಅಗತ್ಯವಿದೆ. ಆಧಾರ್ ಅನ್ನು ಯಾವುದೇ ಸಮಯದಲ್ಲಿ https://eaadhaar.uidai.gov.in ನಿಂದ ಡೌನ್ಲೋಡ್ ಮಾಡಿ ಎಂದು ಹೇಳಿದೆ.
ಆಧಾರ್ ಕಾರ್ಡ್ ಅನ್ನು ಆನ್ಲೈನ್ನಲ್ಲಿ ಡೌನ್ಲೋಡ್ ಮಾಡಲು, ಯುಐಡಿಎಐ ಒದಗಿಸಿದ ನೇರ ಲಿಂಕ್ಗೆ ಲಾಗ್ ಇನ್ ಆಗಬೇಕು. https://eaadhaar.uidai.gov.in ಗೆ ಲಾಗಿನ್ ಆದನಂತ್ರ ಒಟಿಪಿ ಮೂಲಕ ಲಾಗಿನ್ ಮಾಡಿ. ಅದರ ನಂತರ ಕೆಲವು ಹಂತಗಳನ್ನು ಅನುಸರಿಸಿ ನಿಮ್ಮ ಆಧಾರ್ ಅನ್ನು ಡೌನ್ಲೋಡ್ ಮಾಡಬೇಕಾಗುತ್ತದೆ.