ಕೆನಡಾ ಹಾಗೂ ಅಮೆರಿಕದ ಉತ್ತರ ಭಾಗದ ಪ್ರದೇಶಗಳಲ್ಲಿ ಬಿಸಿಲಿನ ಹೊಡೆತ ಜೋರಾಗಿದ್ದು, ರಸ್ತೆಗಳ ಮೇಲೆ ಇರುವ ಲೋಹದ ಫಿಟ್ಟಿಂಗ್ಗಳೆಲ್ಲಾ ವಿಸ್ತರಣೆಗೊಂಡು ಮೂಲ ಸೌಕರ್ಯದ ಮೇಲೆ ಅಡ್ಡ ಪರಿಣಾಮಗಳಾಗುತ್ತಿವೆ.
ಇಲ್ಲಿದೆ ದೇಶದ ಜನತೆ ಹೆಮ್ಮೆಪಡುವ ಸಂಗತಿ: ಸ್ಪೆಲ್ಲಿಂಗ್ ಬೀ 11 ಫೈನಲಿಸ್ಟ್ಗಳ ಪೈಕಿ 9 ಮಂದಿ ಭಾರತೀಯರು
ಕೆಲ ರಸ್ತೆಗಳಂತೂ ಕರಗಿ ದಿಬ್ಬದಂತೆ ಎದ್ದಿರುವಂತೆ ಕಾಣುತ್ತಿವೆ. ಕೆಲವೊಂದು ಮನೆಗಳಿಗೆ ಫಿಟ್ ಮಾಡಲಾದ ಲೋಹದ ಫಿಟ್ಟಿಂಗ್ಗಳು ಶಾಖಕ್ಕೆ ಉಬ್ಬಿ ತಮ್ಮ ಆಕಾರ ಕಳೆದುಕೊಂಡಿರುವ ಚಿತ್ರಗಳು ವೈರಲ್ ಆಗಿವೆ.
ಪಡಿತರ ಚೀಟಿ ಹೊಂದಿದ ಕಾರ್ಮಿಕರಿಗೆ ಗುಡ್ ನ್ಯೂಸ್: ಉಚಿತ ರೇಷನ್ ವಿತರಣೆಗೆ ‘ಸುಪ್ರೀಂ’ ನಿರ್ದೇಶನ
ಇಡಿಯ ಉತ್ತರ ಪೆಸಿಫಿಕ್ ಪ್ರದೇಶದಲ್ಲಿ ಬಿಸಿಲಿನ ಝಳ ಜೋರಾಗಿದ್ದು, ಸಿಯಾಟಲ್ನಲ್ಲಿ ಜೂನ್ 28ರಂದು 42 ಡಿಗ್ರೀ ತಾಪಮಾನ ದಾಖಲಾಗಿದೆ. ಇದೇ ವೇಳೆ ಬ್ರಿಟೀಷ್ ಕೊಲಂಬಿಯಾದ ಲಿಟ್ಟನ್ ಗ್ರಾಮದಲ್ಲಿ 46.6 ಡಿಗ್ರಿ ತಾಪಮಾನ ದಾಖಲಾಗಿದ್ದು, ಕೆನಡಾದ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ.
ವಿಪರೀತ ತಾಪಮಾನದ ಕಾರಣ ಶಾಲೆಗಳು ಹಾಗೂ ಕಚೇರಿಗಳು ತಮ್ಮ ಸಿಬ್ಬಂದಿಯನ್ನು ರಕ್ಷಿಸಲು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿವೆ.