ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಜೊತೆಯಲ್ಲಿರುವ ಅವರ ಮಡದಿ ಅನುಷ್ಕಾ ಶರ್ಮಾ ಆಗಾಗ ಪರ್ಯಾವರಣ ಕಾರ್ಯಕರ್ತರಾಗುತ್ತಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಕೆಲವೊಮ್ಮೆ ಪರಿಸರ ಪ್ರೇಮದ ಒಂದಷ್ಟು ಪೋಸ್ಟ್‌ಗಳನ್ನು ಅನುಷ್ಕಾ ಹಾಕುತ್ತಲೇ ಇರುತ್ತಾರೆ.
ಮುಂಬೈನ ಇಂಧನ ಬೆಲೆ ನ್ಯೂಯಾರ್ಕ್ ಗಿಂತ ʼದುಬಾರಿʼ
ಇದೀಗ ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರಿಂದ ಅಳಿಲು ಸೇವೆಯ ರೂಪದಲ್ಲಿ ಹೊಸ ರೀತಿಯ ಫ್ಯಾಶನ್ ಒಂದಕ್ಕೆ ಹೆಜ್ಜೆ ಇಡಲು ಕೋರಿ ಅನುಷ್ಕಾ ಜಾಗೃತಿ ಮೂಡಿಸುತ್ತಿದ್ದಾರೆ. ಬಳಸಿದ ಬಟ್ಟೆಗಳನ್ನು ಮರಳಿ ಬಳಸುವ ಸರ್ಕ್ಯೂಲರ್-ಫ್ಯಾಶನ್ ಎಂಬ ಟ್ರೆಂಡ್ ಅನ್ನು ಅನುಷ್ಕಾ ಪ್ರಮೋಟ್ ಮಾಡಲು ಮುಂದಾಗಿದ್ದಾರೆ.
ದಾರಿ ತಪ್ಪಿದ ಸೊಸೆಯಿಂದ ಘೋರ ಕೃತ್ಯ, ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಅತ್ತೆಯ ಕೊಲೆ
ಬಾಣಂತನದ ಅವಧಿಯಲ್ಲಿ ತಾವು ಧರಿಸಿದ ಬಟ್ಟೆಗಳನ್ನು ಆನ್ಲೈನ್‌ನಲ್ಲಿ ಸ್ನೇಹ ಪ್ರತಿಷ್ಠಾನದ ಮೂಲಕ ಹರಾಜಿಗೆ ಹಾಕಿರುವ ಅನುಷ್ಕಾ, ಇದರಿಂದಾಗಿ ತಮ್ಮಿಂದ 2.5 ಲಕ್ಷ ಲೀಟರ್ ನೀರು ಉಳಿತಾಯವಾಗಿದೆ ಎಂದು ಹೇಳಿಕೊಂಡಿದ್ದಾರೆ.
“ದೇಶದ ಗರ್ಭಿಣಿ ಮಹಿಳೆಯರ ಪೈಕಿ ಬರೀ 1%ನಷ್ಟು ಮಹಿಳೆಯರು ಮರುಬಳಸಬಲ್ಲ ಬಾಣಂತನದ ಬಟ್ಟೆ ಖರೀದಿ ಮಾಡಿದರೆ, ನಾವೆಲ್ಲಾ ಸೇರಿಕೊಂಡು ವ್ಯಕ್ತಿಯೊಬ್ಬ 200 ವರ್ಷ ಬದುಕಿದರೆ ಆತನಿಗೆ ಬೇಕಾಗುವಷ್ಟು ನೀರನ್ನು ಉಳಿತಾಯ ಮಾಡಬಹುದಾಗಿದೆ. ಇಂಥ ಸಣ್ಣ ಪುಟ್ಟ ಕ್ರಿಯೆಗಳಿಂದ ದೊಡ್ಡ ಬದಲಾವಣೆ ತರಬಹುದಾಗಿದೆ” ಎಂದು ಅನುಷ್ಕಾ ಪರಿಸರದ ಬಗೆಗಿನ ತಮ್ಮ ಅಗಾಧವಾದ ಕಾಳಜಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.