alex Certify ದಾರಿ ತಪ್ಪಿದ ಸೊಸೆಯಿಂದ ಘೋರ ಕೃತ್ಯ, ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಅತ್ತೆಯ ಕೊಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಾರಿ ತಪ್ಪಿದ ಸೊಸೆಯಿಂದ ಘೋರ ಕೃತ್ಯ, ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಅತ್ತೆಯ ಕೊಲೆ

ತುಮಕೂರು: ಉಜ್ಜನಕುಂಟೆಯಲ್ಲಿ ಅತ್ತೆಯನ್ನು ಕೊಲೆ ಮಾಡಿದ ಸೊಸೆಯನ್ನು ಬಂಧಿಸಲಾಗಿದೆ. ತುಮಕೂರು ಜಿಲ್ಲೆ ಶಿರಾ ತಾಲೂಕಿನ ಉಜ್ಜನಕುಂಟೆ ಗ್ರಾಮದ ಸುಧಾಮಣಿ ಅಕ್ರಮ ಸಂಬಂಧ ಹೊಂದಿದ್ದು, ಇದನ್ನು ಪ್ರಶ್ನಿಸಿದ ಹಿನ್ನೆಲೆಯಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಅತ್ತೆ ಸರೋಜಮ್ಮ ಅವರನ್ನು ಕೊಲೆ ಮಾಡಿದ್ದಳು ಎನ್ನಲಾಗಿದೆ.

ಜೂನ್ 14 ರಂದು ಸುಧಾಮಣಿ ಅತ್ತೆ ಸರೋಜಮ್ಮ ಅವರನ್ನು ಕೊಲೆ ಮಾಡಿದ್ದಳು. ಪೊಲೀಸರು ತನಿಖೆ ನಡೆಸಿದ ಸಂದರ್ಭದಲ್ಲಿ ಕೊಲೆ ವಿಚಾರ ಗೊತ್ತಾಗಿದೆ. ಸುಧಾಮಣಿ ಮತ್ತು ಆಕೆಯ ಪ್ರಿಯಕರ ಶ್ರೀರಂಗಪ್ಪ ಅವರನ್ನು ಪೊಲೀಸರು ಬಂಧಿಸಿದ್ದಾರೆ. ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...