ತಮಗೆ ಆನ್ಲೈನ್‌ನಲ್ಲಿ 3.2 ಲಕ್ಷ ರೂ.ಗಳ ಮೋಸವಾಗಿದೆ ಎಂದು ಸೈಬರ್ ವಂಚನೆಯ ದೂರು ದಾಖಲಿಸಿದ್ದ ಛತ್ತೀಸ್‌ಘಡದ ಕಂಕೇರ್ ಜಿಲ್ಲೆಯ ಶಾಲಾ ಶಿಕ್ಷಕರೊಬ್ಬರು ಕೊನೆಗೆ ತಮ್ಮ ಮಗನ ’ಕಿತಾಪತಿ’ಯಿಂದ ಹೀಗೆ ಆಗಿದೆ ಎಂದು ತಿಳಿದು ಶಾಕ್ ಆಗಿದ್ದಾರೆ.
ಆನ್ಲೈನ್‌ನಲ್ಲಿ ಕದನಭೂಮಿಯ ಗೇಮ್ ಒಂದನ್ನು ಆಡಲು, ’ಶಸ್ತ್ರ’ಗಳ ಖರೀದಿ ಮಾಡಲು ಈ ಶಿಕ್ಷಕಿಯ 12 ವರ್ಷದ ಪುತ್ರ ಆಕೆಯ ಫೋನ್‌ನಿಂದ 278 ವ್ಯವಹಾರಗಳನ್ನು ಮಾಡಿದ್ದು, ಅಷ್ಟು ದುಡ್ಡು ಖರ್ಚಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತಿ ಬಾರಿ ಮೊಬೈಲ್ ಮೂಲಕ ಆನ್ಲೈನ್ ವಹಿವಾಟು ಮಾಡುವ ಸಂದರ್ಭ ಓಟಿಪಿ ಕೇಳದೇ ಇದ್ದ ಕಾರಣ ಬಾಲಕ ಭಾರೀ ಸಲೀಸಾಗಿ ದುಡ್ಡು ಖರ್ಚು ಮಾಡಿದ್ದಾನೆ.
ಮುಂಬೈನ ಇಂಧನ ಬೆಲೆ ನ್ಯೂಯಾರ್ಕ್ ಗಿಂತ ʼದುಬಾರಿʼ
ತನ್ನೊಂದಿಗೆ ಆನ್ಲೈನ್‌ನಲ್ಲಿ ಆಟವಾಡುವ ಇನ್ನಿಬ್ಬರು ಹುಡುಗರಿದ್ದಾರೆ ಎಂದು ಬಾಲಕ ತಿಳಿಸಿದ್ದು, ಅವರಿಬ್ಬರೂ ಕೂಡಾ ಈತನಂತೆಯೇ ’ಶಸ್ತ್ರ’ಗಳನ್ನು ಖರೀದಿಸಿದ್ದಾರೆ ಎಂದು ಶಂಕಿಸಲಾಗಿದೆ.
ಜೂನ್ 25ರಂದು ತಮ್ಮ ಖಾತೆಯಲ್ಲಿ 3.2 ಲಕ್ಷ ರೂಪಾಯಿ ಕಳುವಾಗಿರುವುದನ್ನು ಕಂಡು ಶಾಕ್ ಆದ ಶಿಕ್ಷಕಿ, ಈ ಸಂಬಂಧ ಸೈಬರ್ ಅಪರಾಧ ನಿಯಂತ್ರಣ ಇಲಾಖೆಗೆ ದೂರು ಕೊಟ್ಟಿದ್ದಾರೆ.
ಮಾರ್ಚ್ 8ರಿಂದ ಜೂನ್ 10ರ ನಡುವೆ ಆಕೆಯ ಫೋನ್‌ನಿಂದ ಇಷ್ಟೆಲ್ಲಾ ವ್ಯವಹಾರಗಳು ನಡೆದಿವೆ ಎಂದು ಪೊಲೀಸರು ತಿಳಿಸಿದ್ದಾರೆ.