ಮೊಬೈಲ್ ನೆಟ್ವರ್ಕ್ ಸಿಗೋದಿಲ್ಲ ಎಂಬ ಕಾರಣಕ್ಕೆ ಮರವೇರಿದ್ದ 15 ವರ್ಷದ ಬಾಲಕನ ಮೇಲೆ ಸಿಡಿಲೆರಗಿದ ಪರಿಣಾಮ ಆತ ಸಾವನ್ನಪಿದ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದಿದೆ. ಈ ದುರ್ಘಟನೆಯಲ್ಲಿ ಇನ್ನು ಮೂವರು ಬಾಲಕರು ಗಾಯಗೊಡಿದ್ದಾರೆ ಎನ್ನಲಾಗಿದೆ.
ಸೋಮವಾರ ಸಂಜೆ ಸುಮಾರಿಗೆ ದಹನು ತಾಲೂಕಿನ ಮಂಕರ್ಪಾಡ ಎಂಬಲ್ಲಿ ನಾಲ್ವರು ಬಾಲಕರು ಜಾನುವಾರುಗಳನ್ನ ಮೇಯಿಸಲು ತೆರಳಿದ್ದ ವೇಳೆ ಈ ಅವಘಡ ಸಂಭವಿಸಿದೆ ಎಂದು ತಹಶೀಲ್ದಾರ್ ರಾಹುಲ್ ಸಾರಂಗ್ ಹೇಳಿದ್ರು.
ಮಹಾರಾಷ್ಟ್ರ ಜಿಲ್ಲೆಯಲ್ಲಿ ಸೋಮವಾರ ಗುಡುಗು ಮಿಂಚಿನ ಸಮೇತ ಭಾರೀ ಮಳೆಯಾಗಿದೆ. ಮಳೆಯಿಂದಾಗಿ ನೆಟ್ವರ್ಕ್ ಸರಿಯಾಗಿ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಬಾಲಕ ಮೊಬೈಲ್ ಹಿಡಿದು ಮರವೇರಿದ್ದ ಎನ್ನಲಾಗಿದೆ.
ಮೃತ ಬಾಲಕನನ್ನ 15 ವರ್ಷದ ರವೀಂದ್ರ ಕೋರ್ದಾ ಎಂದು ಗುರುತಿಸಲಾಗಿದೆ. ಗಾಯಗೊಂಡ ಇನ್ನುಳಿದ ಬಾಲಕರು ಸಹ 14 ರಿಂದ 16 ವರ್ಷ ಪ್ರಾಯದವರಾಗಿದ್ದು ಇವರನ್ನ ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.