ನಾವು ಹೋದ ಅಂಗಡಿಯಲ್ಲಿ ಯಾರಾದರೂ ದರೋಡೆಕೋರರು ನುಗ್ಗಿದ್ದಾರೆ ಅಂದರೆ ಕೈ ಕಾಲೆಲ್ಲ ನಡುಗಿ ಬಿಡಬಹುದು. ಅವಕಾಶ ಸಿಕ್ಕರೆ ಸಾಕು ಅಲ್ಲಿಂದ ಕಾಲ್ಕಿತ್ತುಬಿಡ್ತೇವೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋವೊಂದರಲ್ಲಿ ವ್ಯಕ್ತಿಯೊಬ್ಬ ಪಕ್ಕದಲ್ಲೇ ಕಳ್ಳ ಪಿಸ್ತೂಲ್ ಹಿಡಿದು ನಿಂತಿದ್ದರೂ ಸಹ ಆರಾಮಾಗಿ ಚಿಕನ್ ವಿಂಗ್ ತಿಂದಿದ್ದಾನೆ.
ರೆಸ್ಟಾರೆಂಟ್ ಒಂದು ಜನರಿಂದ ತುಂಬಿತ್ತು. ಇದೇ ವೇಳೆ ಹೆಲ್ಮೆಟ್ ಧರಿಸಿ ನುಗ್ಗಿದ ಕಳ್ಳನೊಬ್ಬ ಗ್ರಾಹಕರಿಗೆ ಪಿಸ್ತೂಲ್ ತೋರಿಸಿದ್ದಾನೆ. ಇದರಿಂದ ಭಯಗೊಂಡ ಗ್ರಾಹಕರು ತಮ್ಮ ಪರ್ಸ್ ಹಾಗೂ ಮೊಬೈಲ್ಗಳನ್ನ ಕಳ್ಳನಿಗೆ ನೀಡಿ ಒಬ್ಬೊಬ್ಬರಾಗಿಯೇ ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ.
ಆದರೆ ಇಷ್ಟೆಲ್ಲ ನಡೆಯುತ್ತಿದ್ದರೂ ತಲೆ ಕೆಡಿಸಿಕೊಳ್ಳದ ವ್ಯಕ್ತಿಯೊಬ್ಬ ತನ್ನ ಪಾಡಿಗೆ ತಾನು ಚಿಕನ್ ತಿನ್ನುತ್ತಾ ಕೂತಿದ್ದ. ಕಳ್ಳನಿಗೆ ತನ್ನ ಮೊಬೈಲ್ನ್ನೂ ಕೊಟ್ಟ ಈ ಗ್ರಾಹಕ ಮತ್ತೆ ಚಿಕನ್ ತಿನ್ನೋದನ್ನ ಮುಂದುವರಿಸಿದ್ದಾನೆ. ಈ ಎಲ್ಲಾ ದೃಶ್ಯಗಳು ರೆಸ್ಟಾರೆಂಟ್ನ ಸಿಸಿ ಟಿವಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.