ಹೈದರಾಬಾದ್ನ ಭೌತಶಾಸ್ತ್ರಜ್ಞ ಕುಮಾರ್ ಈಶ್ವರನ್ ಎಂಬವರು ಬರೋಬ್ಬರಿ 161 ವರ್ಷದಿಂದ ಯಾರಿಂದಲೂ ಬಗೆಹರಿಸಲು ಸಾಧ್ಯವಾಗದ ರೈಮನ್ ಹೈಪೋಥಿಸ್ಗೆ ಪರಿಹಾರ ಕಂಡು ಹಿಡಿದಿದ್ದೇನೆ ಎಂದು ಹೇಳಿದ್ದಾರೆ.
1859ರಲ್ಲಿ ಬರ್ನ್ಹಾರ್ಡ್ ರೀಮನ್ ಪ್ರತಿಪಾದಿಸಿದ ರೀಮನ್ ಹೈಪೋಥಿಸಿಸ್ ಸಮಸ್ಯೆಯನ್ನ ಅಮೆರಿಕದ ಖ್ಯಾತ ಗಣಿತಜ್ಞ ಸ್ಟಿಫನ್ ಸ್ಮಾಲೆ ಅವರಿಂದ ಬಗೆಹರಿಸಲು ಸಾಧ್ಯವಾಗದ ಟಾಪ್ 10 ಗಣಿತದ ಸಮಸ್ಯೆಗಳಲ್ಲಿ ಸ್ಥಾನ ಪಡೆದಿದೆ. ಅಲ್ಲದೇ ರೀಮನ್ ಹೈಫೋಥಿಸ್ ಸಮಸ್ಯೆಯನ್ನ 7 ಮಿಲೇನಿಯಂ ಗಣಿತದ ಸಮಸ್ಯೆಗಳಲ್ಲಿ ಒಂದು ಎಂದು ಕ್ಲೇ ಮ್ಯಾಥಮೆಟಿಕ್ಸ್ ಇನ್ಸ್ಟಿಟ್ಯೂಟ್ ಆಫ್ ಕ್ರ್ಯಾಂಬಿಡ್ಜ್ ಹೇಳಿದ್ದು ಈ ಸಮಸ್ಯೆಯನ್ನ ಬಗೆಹರಿಸುವವರಿಗೆ 1 ಮಿಲಿಯನ್ ಡಾಲರ್ ಬಹುಮಾನ ಕೊಡೋದಾಗಿಯೂ ಹೇಳಲಾಗಿದೆ.
ಈಶ್ವರನ್ ಶ್ರೀನಿಧಿ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ & ಟೆಕ್ನಾಲಜಿಯಲ್ಲಿ ಗಣಿತ ಭೌತಶಾಸ್ತ್ರಜ್ಞರಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಯಾರಿಂದಲೂ ಸಾಧ್ಯವಾಗದ ಈ ಜಟಿಲ ಸಮಸ್ಯೆಗೆ ಪರಿಹಾರ ಕಂಡುಹಿಡಿದಿರೋದಾಗಿ ಹೇಳಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಈಶ್ವರನ್, ನಾನು 2016ರಲ್ಲೇ ಈ ಜಟಿಲ ಸಮಸ್ಯೆಗೆ ಪರಿಹಾರ ನೀಡಿದ್ದೆ. ಸುಮಾರು ಆರು ವಾರಗಳ ಕಾಲ ಈ ರೀಮನ್ ಹೈಪೋಥಿಸಿಸ್ ಮೇಲೆ ಕೆಲಸ ಮಾಡಿದ್ದು ಇದರ ಬಗ್ಗೆ ಮುಕ್ತ ಚರ್ಚೆಗೂ ಸಿದ್ಧನಿದ್ದೇನೆ. 2018-19ರಲ್ಲಿ ಸಾಕಷ್ಟು ಕಡೆ ಇದಕ್ಕೆ ವಿವರಣೆಯನ್ನೂ ನೀಡಿದ್ದೇನೆ ಎಂದು ಹೇಳಿದ್ರು. 2020ರಲ್ಲಿ ಈ ಸಮಸ್ಯೆಗೆ ಈಶ್ವರನ್ ನೀಡಿರುವ ಪರಿಹಾರ ಸರಿಯಾಗಿದೆಯೇ ಎಂದು ನೋಡಲು 8 ಮಂದಿ ಗಣಿತಜ್ಞರು ಹಾಗೂ ಭೌತಶಾಸ್ತ್ರಜ್ಞರ ಸಮಿತಿಯನ್ನ ರಚನೆ ಮಾಡಲಾಗಿದೆ.