ರಾಜಸ್ಥಾನ ಸರ್ಕಾರವು ಧಾರ್ಮಿಕ ಸ್ಥಳಗಳನ್ನ ತೆರೆಯಲು ಅನುಮತಿ ನೀಡಿದೆ. ಹೀಗಾಗಿ ಸೋಮವಾರ ಪ್ರಸಿದ್ಧ ಅಜ್ಮೀರ್ ಷರೀಫ್ ದರ್ಗಾಗೆ ಆಗಮಿಸಿದ ಭಕ್ತರು ಕೋವಿಡ್ ಮಾರ್ಗಸೂಚಿಗಳನ್ನ ಪಾಲಿಸುವ ಮೂಲಕ ಪ್ರಾರ್ಥನೆ ಸಲ್ಲಿಸಿದ್ರು.
ಕೊರೊನಾ ಎರಡನೆ ಅಲೆಯ ಭೀಕರತೆ ಹೆಚ್ಚಾದ ಬಳಿಕ ದರ್ಗಾವನ್ನ ಏಪ್ರಿಲ್ 15ನೇ ತಾರೀಖಿನಂದು ಬಂದ್ ಮಾಡಲಾಗಿತ್ತು.
ಸರ್ಕಾರದ ಆದೇಶದಂತೆ ದರ್ಗಾದಲ್ಲಿ ಭಕ್ತರ ಪ್ರವೇಶಕ್ಕೆ ಅನುಮತಿ ನೀಡಲಾಗಿದ್ದರೂ ಸಹ ದರ್ಗಾದಲ್ಲಿ ಚಾದರ್ ಹಾಗೂ ಹೂವುಗಳನ್ನ ಅರ್ಪಿಸಲು ನಿರ್ಬಂಧ ಹೇರಲಾಗಿದೆ ಎಂದು ಖ್ವಾಜಾ ಗರಿಬ್ ನವಾಬ್ ಹೇಳಿದ್ದಾರೆ.
ಭಕ್ತಾದಿಗಳ ಸಂಖ್ಯೆಯ ಮೇಲೆಯೇ ಅಜ್ಮೀರ್ ಷರೀಫ್ ದರ್ಗಾದ ಆರ್ಥಿಕತೆಯು ಅವಲಂಬಿತವಾಗಿದೆ. ಲಾಕ್ಡೌನ್ ಹಾಗೂ ಕೊರೊನಾ ಸಂಬಂಧಿ ನಿರ್ಬಂಧಗಳಿಂದಾಗಿ ಕಳೆದ ಎರಡು ತಿಂಗಳು ದರ್ಗಾಗೆ ಯಾವುದೇ ಪ್ರವಾಸಿಗರು ಭೇಟಿ ನೀಡಿರಲಿಲ್ಲ.