ʼಕಾಂಟಾ ಲಗಾʼ ಹಾಡಿನ ಮೂಲಕ ಫೇಮಸ್ ಆಗಿರುವ ಟಿವಿ ನಟಿ ಶೆಫಾಲಿ ಜರಿವಾಲಾ ತಮ್ಮ ಮೊದಲ ಪತಿಗೆ ವಿಚ್ಛೇದನ ಕೊಟ್ಟ ಬಗ್ಗೆ ಕೇಳಿಬರುತ್ತಿರುವ ಮಾತುಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಮೊದಲ ಪತಿಗೆ ವಿಚ್ಛೇದನ ಕೊಟ್ಟ ಬಳಿಕ ಪರಾಗ್ ತ್ಯಾಗಿರನ್ನು ಮದುವೆಯಾಗಿರುವ ಶೆಫಾಲಿ, ಈ ಬಗ್ಗೆ ಪೋರ್ಟಲ್ ಒಂದಕ್ಕೆ ಕೊಟ್ಟ ಸಂದರ್ಶನದ ವೇಳೆ ಮಾತನಾಡಿದ್ದಾರೆ.
ಇಂಟರ್ನೆಟ್ ನಲ್ಲಿ ಧೂಳೆಬ್ಬಿಸಿದೆ ಈ ವಿಡಿಯೋ: ನೀವೂ ನೋಡಿ ಎಂಜಾಯ್ ಮಾಡಿ
“ಸಣ್ಣಪುಟ್ಟ ವಿಚಾರಗಳಿಗೆಲ್ಲಾ ಮಹಿಳೆಯರನ್ನು ಜಡ್ಜ್ ಮಾಡಲಾಗುತ್ತದೆ. ಇತ್ತೀಚೆಗೆ ನಾನು ಸಂತಸದ ಕ್ಷಣಗಳ ಚಿತ್ರಗಳನ್ನು ಹಾಕಿದರೆ ನನ್ನನ್ನು ಜಡ್ಜ್ ಮಾಡಲಾಗುತ್ತದೆ. ಮಹಿಳೆಯರನ್ನು ಇಂಥ ಜಡ್ಜ್ಮೆಂಟ್ಗಳಿಗೆ ಏಕೆ ಈಡು ಮಾಡಲಾಗುತ್ತದೆ ಹಾಗೂ ಪುರುಷರಿಗೆ ಏಕೆ ಇಲ್ಲ. ಗಂಡಸರಿಗಾದರೆ 10 ಬಾರಿ ಮದುವೆಯಾದರೂ ಓಕೆ ಆದರೆ ಮಹಿಳೆ ಮಾತ್ರ ಎರಡು ಬಾರಿ ಮದುವೆಯಾಗುವುದು ತಪ್ಪೇ?” ಎಂದು ಶೆಫಾಲಿ ಕೇಳುತ್ತಾರೆ.
ಮಾನವೀಯತೆ ತೋರಿದ ಸಭಾಪತಿ ಬಸವರಾಜ ಹೊರಟ್ಟಿ
“ಅವಳೇ ಏನೋ ಮಾಡಿರಬಹುದು. ಅವಳದ್ದೇ ತಪ್ಪು ಅದು. ಅವಳು ಕಾಂಟಾ ಲಗಾ, ಅವಳು ಬಹಳ ಬೋಲ್ಡ್. ಕಮ್ ಆನ್, ಅದು ಒಂದು ಪಾತ್ರ ನಾನು ತೆರೆಯ ಮೇಲೆ ನಿಭಾಯಿಸುತ್ತೇನೆ. ನೀವು ಕೇವಲ ವಿಲನ್ ಪಾತ್ರಧಾರಿಯಾದ ಮಾತ್ರಕ್ಕೆ ನೀವು ಬರೀ ನಟರು ಮಾತ್ರವೇ ಹೊರತು ನಿಜಜೀವನದಲ್ಲಿ ಹಾಗೆಲ್ಲಾ ಇರಬೇಕು ಅಂತೇನಿಲ್ಲ” ಎಂದಿದ್ದಾರೆ.