ಕೊರೊನಾದಿಂದಾಗಿ ಒಂದಿಲ್ಲೊಂದು ಕಠಿಣ ಸುದ್ದಿಗಳನ್ನ ಸೋಶಿಯಲ್ ಮೀಡಿಯಾದಲ್ಲಿ ನೋಡುತ್ತಿರೋದ್ರ ನಡುವೆಯೇ ವಿಶೇಷ ನೃತ್ಯದ ವಿಡಿಯೋವೊಂದು ನೆಟ್ಟಿಗರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಅಮೆರಿಕದ ಕ್ಯಾಲಿಫೋರ್ನಿಯಾದ ಪಾರ್ಕ್ ಒಂದರಲ್ಲಿ ಜನರ ಮಧ್ಯೆ ಇದ್ದಕ್ಕಿದ್ದಂತೆ ಬಂದು ನೃತ್ಯ ಪ್ರದರ್ಶಿಸುವ ಮೂಲಕ ಈ ತಂಡ ಜನರನ್ನ ರಂಜಿಸಿದೆ. ಈ ವಿಡಿಯೋ ಟ್ವಿಟರ್ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈ ರೀತಿ ಸಾರ್ವಜನಿಕ ಸ್ಥಳದಲ್ಲಿ ಏಕಾಏಕಿ ಬಂದು ನೃತ್ಯ ಪ್ರದರ್ಶನ ನೀಡೋದನ್ನ ದಿ ಫ್ಲಾಶ್ ಮಾಬ್ ಎಂದು ಕರೆಯಲಾಗುತ್ತೆ. ಸಾಂತಾ ಮೊನಿಕಾ ಪಾರ್ಕ್ನಲ್ಲಿ ಬೋಬ್ಸ್ ಡಾನ್ಸ್ ಶಾಪ್ ಈ ದಿ ಫ್ಲಾಶ್ ಮಾಬ್ನ್ನು ಆಯೋಜಿಸಿತ್ತು. ಅಂದಹಾಗೆ ಈ ಫ್ಲಾಶ್ ಮೋಬ್ನಲ್ಲಿ ನೃತ್ಯ ಮಾಡೋದಕ್ಕೂ ಮುನ್ನ ಇವರೆಲ್ಲ ಕೇವಲ 2 ಗಂಟೆಗಳ ಕಾಲ ಮಾತ್ರ ತರಬೇತಿಯನ್ನ ಪಡೆದಿದ್ದರಂತೆ.
ಕೊರೊನಾ ಲಸಿಕೆ ಪಡೆದವರಿಗೆ ಕ್ಷೌರದಂಗಡಿಯಲ್ಲಿ ಸಿಗುತ್ತೆ ವಿಶೇಷ ಸೇವೆ..!
ಈ ವಿಡಿಯೋ ಟ್ವಿಟರ್ನಲ್ಲಿ ಎಷ್ಟರ ಮಟ್ಟಿಗೆ ವೈರಲ್ ಆಗಿದೆ ಅಂದರೆ ಅಮೆರಿಕದ ಬಾಸ್ಕೆಟ್ ಬಾಲ್ ಆಟಗಾರ ರೆಕ್ಸ್ ಚಾಪ್ಮನ್ ಇದನ್ನ ಟೈಮ್ಲೈನ್ ಕ್ಲೆನ್ಸರ್ ಎಂದು ಹೊಗಳಿದ್ದಾರೆ. ಈ ವಿಡಿಯೋ 7.7 ಲಕ್ಷ ವೀವ್ಸ್ ಸಂಪಾದಿಸುವಲ್ಲಿ ಯಶಸ್ವಿಯಾಗಿದೆ.
https://www.instagram.com/reel/CQZUY6LJAaO/?utm_source=ig_web_copy_link