ತುಮಕೂರು: ಎಕ್ಸಾಂ ಬರೆದಿದ್ದೇವೆ, ರಿಸಲ್ಟ್ ಗಾಗಿ ಕಾಯುತ್ತಿದ್ದೇವೆ ಎಂಬ ಸಚಿವ ಸಿ.ಪಿ. ಯೋಗೇಶ್ವರ್ ಹೇಳಿಕೆಗೆ ತಿರುಗೇಟು ನೀಡಿರುವ ಶಾಸಕ ಎಂ.ಪಿ. ರೇಣುಕಾಚಾರ್ಯ, ಪರೀಕ್ಷೆ ಬರೆದವರಿಗೆ ತಮಗೆ ಬರುವ ಮಾರ್ಕ್ಸ್ ಬಗ್ಗೆ ಗೊತ್ತಿರುತ್ತೆ ಎಂದು ಹೇಳಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ರೇಣುಕಾಚಾರ್ಯ, ಸಿ.ಪಿ. ಯೋಗೇಶ್ವರ್ ಅವರದ್ದು ನಕಲಿ ಪರೀಕ್ಷೆ. ನಿಜವಾದ ಪರೀಕ್ಷೆಗಳನ್ನು ಬರೆದವರೇ ಫೇಲ್ ಆಗಿದ್ದಾರೆ. ಇನ್ನು ನಕಲಿ ಪರೀಕ್ಷೆ ಬರೆದವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಎಕ್ಸಾಂ ಬರೆದವರಿಗೆ ಈಗಾಗಲೇ ಅವರ ಹಣೆಬರಹ ಗೊತ್ತಿರುತ್ತೆ. ತಮಗೆ ಎಷ್ಟು ಮಾರ್ಕ್ಸ್ ಬರುತ್ತೆ ಎಂಬುದೂ ಅವರಿಗೆ ತಿಳಿದಿರುತ್ತೆ ಎಂದು ಟಾಂಗ್ ನೀಡಿದರು.
‘ಟೆಲಿಗ್ರಾಂ’ ಬಳಕೆದಾರರಿಗೆ ಸಿಹಿ ಸುದ್ದಿ
ಸಿಎಂ ಬಿ.ಎಸ್.ವೈ. ಅವರಿಗೆ ಈಗಾಗಲೇ ವರಿಷ್ಠರು ಒಳ್ಳೆ ಅಂಕಗಳನ್ನು ಕೊಟ್ಟಿದ್ದಾರೆ. ಯಡಿಯೂರಪ್ಪನವರು ಮಾಡಿರುವ ಉತ್ತಮ ಕೆಲಸಗಳ ಆಧಾರದ ಮೇಲೆ ಅವರಿಗೆ ಉತ್ತಮ ಅಂಕಗಳನ್ನು ನೀಡಲಾಗಿದೆ. ಹೀಗಾಗಿ ಯೋಗೇಶ್ವರ್ ಬರೆದಿರುವ ಪರೀಕ್ಷೆ ಬಗ್ಗೆ ಅವರೇ ಅವಲೋಕಿಸಿಕೊಳ್ಳಲಿ ಎಂದು ಹೇಳಿದರು.