ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಜನ್ಧನ್ ಖಾತೆಯನ್ನ ಹೊಂದಿರುವ ಗ್ರಾಹಕರು 2 ಲಕ್ಷ ರೂಪಾಯಿ ಮೌಲ್ಯದವರೆಗೆ ಉಚಿತ ವಿಮಾ ಸೌಲಭ್ಯವನ್ನ ಹೊಂದಬಹುದಾಗಿದೆ. ಜನ್ ಧನ್ ಖಾತೆಯನ್ನ ಹೊಂದಿರುವವರಿಗೆ ಎಸ್ಬಿಐ ಬ್ಯಾಂಕ್ 2 ಲಕ್ಷ ಮೌಲ್ಯದವರೆಗೆ ಉಚಿತ ವಿಮಾ ಸೌಲಭ್ಯ ನಿಡೋದ್ರ ಜೊತೆಗೆ ರೂಪೇ ಡೆಬಿಟ್ ಕಾರ್ಡ್ನ್ನೂ ನೀಡಲಿದೆ.
ಲಸಿಕಾ ಕೇಂದ್ರಕ್ಕೆ ತೆರಳಿ ಮೊದಲ ಡೋಸ್ ಪಡೆಯೋ ಮೂಲಕ ಗ್ರಾಮಕ್ಕೆ ಮಾದರಿಯಾದ್ರು 96 ವರ್ಷದ ವೃದ್ಧೆ…!
ಜನ್ಧನ್ ಖಾತೆದಾರ ವಿದೇಶದಲ್ಲಿ ಅಪಘಾತಕ್ಕೀಡಾದರೂ ಸಹ ವಿಮಾ ಮೊತ್ತವನ್ನ ಪಡೆಯಬಹುದು. 2018 ಆಗಸ್ಟ್ 28ರಂದು ಖಾತೆ ತೆರೆದ ವ್ಯಕ್ತಿಗೆ 1 ಲಕ್ಷ ಹಾಗೂ ಈ ದಿನಾಂಕದ ಬಳಿಕ ಜನ್ ಧನ್ ಖಾತೆ ತೆರೆದವರಿಗೆ 2 ಲಕ್ಷ ರೂಪಾಯಿ ವಿಮಾ ಮೊತ್ತ ಸಿಗಲಿದೆ.
GOOD NEWS: ಕೇವಲ 999 ರೂ. ಗಳಿಗೆ ವಿಮಾನ ಪ್ರಯಾಣ ಲಭ್ಯ
ಪ್ರಧಾನ್ ಮಂತ್ರಿ ಜನ್ ಧನ್ ಯೋಜನೆಯನ್ನ ಪ್ರಧಾನಿ ಮೋದಿ 2018ರ ಆಗಸ್ಟ್ 28ರಂದು ಜಾರಿಗೆ ತಂದಿದ್ದರು. ಈ ಯೋಜನೆಯ ಮೂಲಕ ದೇಶದ ಪ್ರತಿಯೊಬ್ಬ ಪ್ರಜೆಯೂ ಬ್ಯಾಂಕ್ ವ್ಯವಹಾರ ನಡೆಸುವಂತಾಗಬೇಕು ಅನ್ನೋದು ಕೇಂದ್ರ ಸರ್ಕಾರದ ಉದ್ದೇಶವಾಗಿತ್ತು.
ಜನ್ ಧನ್ ಖಾತೆಯನ್ನ ತೆರೆಯುವ ವ್ಯಕ್ತಿಯು ಕನಿಷ್ಟ ಮೊತ್ತವನ್ನ ಖಾತೆಯಲ್ಲಿ ಇಡಬೇಕು ಎಂದೇನಿಲ್ಲ. ಈ ಖಾತೆಯನ್ನ ಹೊಂದಿರುವವರಿಗೆ ರೂಪೇ ಕಾರ್ಡ್ ಸೇರಿದಂತೆ ಇನ್ನೂ ಹಲವು ಸೌಲಭ್ಯಗಳನ್ನ ನೀಡಲಾಗುತ್ತೆ.