ಕೋವಿಡ್ ಸಂಕಷ್ಟದ ನಡುವೆ ಮಾವಿನ ಹಣ್ಣಿನ ಸೀಸನ್ ಆಗಮಿಸಿದ್ದು, ಮಿಲ್ಕ್ ಶೇಕ್‌ನಿಂದ ಐಸ್‌ಕ್ರೀಂ ವರೆಗೆ ಹಣ್ಣುಗಳ ರಾಜನ ವಿವಿಧ ರೆಸಿಪಿಗಳು ಆನ್ಲೈನ್‌ನಲ್ಲಿ ಸದ್ದು ಮಾಡುತ್ತಿವೆ.
ಮಾವಿನ ಹಣ್ಣನ್ನು ತಿನ್ನಲು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಡಯಾಬಿಟಿಸ್ ಇರುವ ಮಂದಿಗೆ ಹಣ್ಣಿನ ಸೇವನೆಯಿಂದ ದೇಹದಲ್ಲಿ ಸಕ್ಕರೆ ಅಂಶ ಜಾಸ್ತಿಯಾಗುವ ಭಯ ಇದ್ದೇ ಇರುತ್ತದೆ. ಇಂಥ ಮಂದಿಗೆ ರಿಲೀಫ್ ಕೊಡಲು ಮುಂದಾದ ಪಾಕಿಸ್ತಾನಿ ತಜ್ಞರೊಬ್ಬರು ಸಕ್ಕರೆರಹಿತ ಮಾವಿನ ಹಣ್ಣಿನ ಮೂರು ವಿಧಗಳನ್ನು ಪರಿಚಯಿಸಿದ್ದಾರೆ.
ಈ ಹಣ್ಣುಗಳಲ್ಲಿ ಕೇವಲ 4-6% ಸಕ್ಕರೆ ಪ್ರಮಾಣವಿದ್ದು, ಸೊನಾರೋ, ಗ್ಲೆನ್ ಹಾಗೂ ಕೆಯ್ಟ್ ಎಂಬ ಹೆಸರುಗಳಲ್ಲಿ ಲಭ್ಯವಿವೆ.
ತನ್ನ ಸಾಲದ ಮಾಹಿತಿ ಕಂಡು ಬೆಚ್ಚಿಬಿದ್ಲು ಯುವತಿ…!
ಸಿಂಧ್ ಪ್ರಾಂತ್ಯದ ತಾಂಡೋ ಅಲ್ಲಾಯಾರ್‌ನ ಖಾಸಗಿ ಕೃಷಿ ಫಾರಂನ ಎಂ.ಎಚ್. ಪನ್ಹಾವರ್ ಹೆಸರಿನ ಮಾವಿನ ತಜ್ಞರು ಈ ತಳಿಗಳನ್ನು ಅಭಿವೃದ್ಧಿಪಡಿಸಿದ್ದು, ಪಾಕಿಸ್ತಾನದ ಮಾರುಕಟ್ಟೆಗಳಲ್ಲಿ ಸಿಗುತ್ತಿವೆ.
ಬೈಕರ್ ಗೆ ಏಕಾಏಕಿ ಎದುರಾದ್ವು 3 ಕರಡಿ: ವಿಡಿಯೋ ವೈರಲ್
ಪನ್ಹಾವರ್ ಅವರು ಮಾವಿನ ಹಣ್ಣುಗಳು ಹಾಗೂ ಬಾಳೆ ಹಣ್ಣುಗಳ ಮೇಲೆ ಮಾಡಿರುವ ಸಂಶೋಧನೆಗೆ ಗೌರವಪೂರಕವಾಗಿ ಪಾಕಿಸ್ತಾನ ಸರ್ಕಾರವು ಸಿತಾರಾ-ಏ-ಇಮ್ತಿಯಾಜ್ ಸನ್ಮಾನ ನೀಡಿದೆ.
ತಮ್ಮೂರಿನ ವಾತಾವರಣ ಹಾಗೂ ಮಣ್ಣಿನಲ್ಲಿ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಲಾದ ಮಾವಿನಹಣ್ಣುಗಳನ್ನು ಬೆಳೆಸಿ ಪ್ರಯೋಗ ಮಾಡುತ್ತಾರೆ ಪನ್ಹಾವರ್.