ಅಮೃತ್ಸರದಿಂದ ದುಬೈವರೆಗೆ ಏರ್ ಇಂಡಿಯಾ ಅಂತಾರಾಷ್ಟ್ರೀಯ ವಿಮಾನದಲ್ಲಿ ಏಕಾಂಗಿಯಾಗಿ ಪ್ರಯಾಣ ಮಾಡುವ ವೇಳೆ ನನಗೆ ಮಹಾರಾಜನಂತೆ ಎನಿಸುತ್ತಿತ್ತು ಎಂದು ಅರಬ್ ರಾಷ್ಟ್ರದ ಉದ್ಯಮಿ ಅನುಭವ ಹಂಚಿಕೊಂಡಿದ್ದಾರೆ.
ಎಸ್ಪಿ ಸಿಂಗ್ ಓಬೆರಾಯ್ ಎಂಬವರು ಬುಧವಾರ ಏರ್ ಇಂಡಿಯಾ ವಿಮಾನದಲ್ಲಿ ಒಬ್ಬರೇ ಮೂರು ಗಂಟೆಗಳ ಕಾಲ ಪ್ರಯಾಣ ಮಾಡಿದ್ದಾರೆ.
ಜೂನ್ 23ರ ಬೆಳಗ್ಗೆ 4 ಗಂಟೆ ಸುಮಾರಿಗೆ ನಾನು ಅಮೃತಸರದಿಂದ ದುಬೈಗೆ ಪ್ರಯಾಣ ಮಾಡಲು ಏರ್ ಇಂಡಿಯಾ ವಿಮಾನವನ್ನ ಏರಿದೆ. ನಾನು ಎಷ್ಟು ಅದೃಷ್ಟವಂತ ಎಂದರೆ ಇಡೀ ವಿಮಾನದಲ್ಲಿ ಪ್ರಯಾಣಿಕನಂತೆ ಇದ್ದದ್ದು ನಾನು ಮಾತ್ರ. ನನಗಂತೂ ಈ ಪ್ರಯಾಣದ ತುಂಬೆಲ್ಲ ಮಹಾರಾಜನಂತೆ ಭಾಸವಾಗುತ್ತಿತ್ತು ಎಂದು ಹರ್ಷ ವ್ಯಕ್ತಪಡಿಸಿದ್ರು.
ತನ್ನ ಸಾಲದ ಮಾಹಿತಿ ಕಂಡು ಬೆಚ್ಚಿಬಿದ್ಲು ಯುವತಿ…!
ದುಬೈನಲ್ಲಿ ಓಬೆರಾಯ್ 10 ವರ್ಷದ ಗೋಲ್ಡನ್ ವೀಸಾ ಹೊಂದಿದ್ದಾರೆ. ಏರ್ ಇಂಡಿಯಾ ಸಿಬ್ಬಂದಿ ನನ್ನನ್ನ ಚೆನ್ನಾಗಿ ಉಪಚರಿಸಿದ್ದಾರೆ. ಮಾತ್ರವಲ್ಲದೇ ಖಾಲಿ ವಿಮಾನದಲ್ಲಿ ಕೂತಿದ್ದ ನನ್ನ ಫೋಟೋವನ್ನೂ ಕ್ಲಿಕ್ಕಿಸಲಾಯ್ತು ಎಂದು ಹೇಳಿದ್ದಾರೆ.
ಹರಿಕಥೆ ಮಾದರಿಯಲ್ಲೇ ಶುರುವಾಯ್ತು ಏಸು ಕಥೆ…!
ಇದೆಲ್ಲದರ ಜೊತೆಯಲ್ಲಿ ವಿಮಾನದಲ್ಲಿ ಒಬ್ಬನೇ ಇದ್ದುದ್ದರಿಂದ ಕೊಂಚ ಬೇಸರವೂ ಆಯಿತು. ಟೈಮ್ ಪಾಸ್ ಮಾಡುವ ಸಲುವಾಗಿ ನಾನು ವಿಮಾನದ ಸೀಟು, ಕಿಟಕಿಗಳನ್ನ ಲೆಕ್ಕ ಹಾಕುತ್ತಿದ್ದೆ ಎಂದು ಹೇಳಿದ್ದಾರೆ.
ಒಂದು ವೇಳೆ ನನಗೆ ಇನ್ನೊಂದು ಬಾರಿ ಏಕಾಂಗಿ ವಿಮಾನ ಯಾನಕ್ಕೆ ಕರೆದರೆ ಬಹುಶಃ ನಾನದನ್ನ ನಿರಾಕರಿಸುತ್ತೇನೆ. ಜೀವನದಲ್ಲಿ ಒಮ್ಮೆ ಈ ಅನುಭವ ಸಾಕು. ಸಿಕ್ಕಾಪಟ್ಟೆ ಬೋರೆನಿಸುತ್ತೆ ಎಂದು ಹೇಳಿದ್ರು.