alex Certify BIG NEWS: ಮೊಬೈಲ್ ಸ್ಕ್ರೀನ್‌ನಿಂದ ಗಂಟಲಿನ ಸ್ವಾಬ್ ಸ್ಯಾಂಪಲ್‌ ಸಂಗ್ರಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮೊಬೈಲ್ ಸ್ಕ್ರೀನ್‌ನಿಂದ ಗಂಟಲಿನ ಸ್ವಾಬ್ ಸ್ಯಾಂಪಲ್‌ ಸಂಗ್ರಹ

Covid-19 Swab Samples Can Now be Collected From Your Mobile Screens

ಕೋವಿಡ್-19 ಪರೀಕ್ಷೆಗೆ ಬೇಕಾದ ಸ್ವಾಬ್ ಸ್ಯಾಂಪ್ಲಿಂಗ್‌ ಅನ್ನು ಮೊಬೈಲ್ ಸ್ಕ್ರೀನ್‌ಗಳಿಂದಲೇ ಮಾಡಬಹುದಾದ ಸರಳ ವಿಧಾನವನ್ನು ಸಂಶೋಧಕರ ತಂಡವೊಂದು ಆವಿಷ್ಕರಿಸಿದೆ.

ಲಂಡನ್‌ ವಿವಿ ಕಾಲೇಜಿನ ಸಂಶೋಧಕರ ತಂಡವೊಂದು ಸ್ವಾಬ್‌ಗಳ ಪರೀಕ್ಷೆಯನ್ನು ಜನರಿಂದ ನೇರವಾಗಿ ಮಾಡುವ ಬದಲಿಗೆ ಮೊಬೈಲ್ ಸ್ಕ್ರೀನ್‌ಗಳಿಂದ ಮಾಡಿದೆ. ಸಾಮಾನ್ಯವಾದ ಪಿಸಿಆರ್‌ ಪರೀಕ್ಷೆಯಲ್ಲಿ ಪಾಸಿಟಿವ್ ಕಂಡುಬಂದ ಮಂದಿ ಈ ಸ್ಕ್ರೀನ್ ಪರೀಕ್ಷೆಯಲ್ಲೂ ಪಾಸಿಟಿವ್ ಕಂಡುಬಂದಿರುವುದನ್ನು ಸಂಶೋಧಕರು ಖಾತ್ರಿ ಮಾಡಿಕೊಂಡಿದ್ದಾರೆ.

ʼಮುನ್ನಾಭಾಯ್ʼ ಚಿತ್ರದ ಸರ್ಕಿಟ್ ಮದುವೆ ಕುರಿತು ಹರಿದಾಡುತ್ತಿದೆ ಈ ವಿಷಯ

ಫೋನ್‌ ಸ್ಕ್ರೀನ್ ಪರೀಕ್ಷೆ (ಪೋಸ್ಟ್) ಎಂದು ಕರೆಯಲಾಗುವ ಈ ಟೆಸ್ಟಿಂಗ್‌ ಮೂಲಕ ಭಾರೀ ವೈರಲ್ ಲೋಡ್ ಇರುವ ಮಂದಿಯ ಪೈಕಿ 81-100 ಪ್ರತಿಶತ ಮಂದಿಯ ಫೋನ್‌ಗಳಲ್ಲಿ ವೈರಸ್ ಇರುವುದನ್ನು ಕಂಡುಕೊಳ್ಳಲಾಗಿದೆ. ಕ್ಲಿನಿಕಲ್ ಪರೀಕ್ಷೆಯ ಬದಲಿಗೆ ಪೋಸ್ಟ್‌ನಂಥ ಸಹಜ ಪರೀಕ್ಷೆಗಳ ಮೂಲಕ ಸಾಕಷ್ಟು ದುಡ್ಡು ಉಳಿತಾಯ ಮಾಡಬಹುದಾಗಿದ್ದು ಕಡಿಮೆ ತಲಾ ಆದಾಯವಿರುವ ದೇಶಗಳಿಗೆ ಇದು ಪರಿಣಾಮಕಾರಿಯಾಗಲಿದೆ.

ಪುತ್ರಿ ತಂದ ಗುಲಾಬಿ ಹೂವಿನೊಳಗಿದ್ದ ಕೌತುಕ ಕಂಡು ತಾಯಿಗೆ ಅಚ್ಚರಿ…!

ಇದು ಆಂಟಿಜನ್ ಲ್ಯಾಟರಲ್‌ ಫ್ಲೋ ಟೆಸ್ಟ್‌ನಷ್ಟೇ ಪರಿಣಾಮಕಾರಿಯಾದ ಟೆಸ್ಟ್ ಎಂದು ಹೇಳಲಾಗಿದೆ. ಗಂಟಲಿನ ಸ್ವಾಬ್ ತೆಗೆಯುವಾಗ ಆಗುವ ಕಿರಿಕಿರಿಯನ್ನು ಈ ಪೋಸ್ಟ್‌ ಟೆಸ್ಟಿಂಗ್ ಮೂಲಕ ತಪ್ಪಿಸಬಹುದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...