ಕೊರೊನಾ ವೈರಸ್ನಿಂದಾಗಿ ವರ್ಕ್ ಫ್ರಮ್ ಹೋಮ್ ಸಾಮಾನ್ಯ ಎಂಬಂತಾಗಿದೆ. ಹೀಗಾಗಿ ಜೂಮ್ ಕಾಲ್ ಮೂಲಕವೇ ಸಹೋದ್ಯೋಗಿಯ ಜೊತೆ ಮಾತುಕತೆ ನಡೆಸಬೇಕಾಗಿ ಬಂದಿದೆ. ಇದೇ ವಿಚಾರವಾಗಿ ಮಹಿಳೆಯೊಬ್ಬರು ವಿಚಿತ್ರ ವಿಚಾರವೊಂದನ್ನ ಶೇರ್ ಮಾಡಿದ್ದಾರೆ.
ಈ ಮಹಿಳೆಯು ಬರೋಬ್ಬರಿ 264 ದಿನಗಳ ಕಾಲ ಒಂದೇ ಶರ್ಟ್ ಧರಿಸಿ ಜೂಮ್ ಮೀಟಿಂಗ್ನಲ್ಲಿ ಭಾಗಿಯಾಗಿದ್ದಾಳೆ. ವಿಶೇಷ ಅಂದರೆ ಇದನ್ನ ಕಂಪನಿಯ ಯಾವೊಬ್ಬ ಸಹೋದ್ಯೋಗಿಯೂ ಗಮನಿಸಿಲ್ಲವಂತೆ.
ಈ ವಿಚಾರವನ್ನ ಮಹಿಳೆ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು ಬರೋಬ್ಬರಿ 15 ತಿಂಗಳುಗಳ ಕಾಲ ತಾವು ಒಂದೇ ಶರ್ಟ್ ಧರಿಸಿದ್ದಾಗಿ ಹೇಳಿಕೊಂಡಿದ್ದಾರೆ. ಇನ್ನಾದರೂ ಯಾರಾದರೂ ಇದನ್ನ ಗಮನಿಸುತ್ತಾರಾ ಎಂಬ ಉತ್ಸಾಹದಲ್ಲಿದ್ದೇನೆ ಎಂದು ಹೇಳಿದ್ದಾರೆ.
https://youtu.be/1cWUGrw_Yd8