ʼಚಕ್ ದೇ ಇಂಡಿಯಾʼ ಖ್ಯಾತಿಯ ಸಾಗರಿಕಾ ಘಾಟ್ಗೆ ತಮ್ಮ ಪತಿ ಕ್ರಿಕೆಟಿಗ ಜಹೀರ್ ಜೊತೆ ತೆಗೆದ ಮುದ್ದಾದ ಸೆಲ್ಫಿಯೊಂದನ್ನ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಕಣ್ಣಿಗೆ ರಸದೌತಣ ಬಡಿಸಿದ್ದಾರೆ.
ಸಾಗರಿಕಾ ನೀಡಿರುವ ಶೀರ್ಷಿಕೆಯ ಪ್ರಕಾರ ಈ ಫೋಟೋವನ್ನ ಅವರು ಮನೆಯಲ್ಲಿಯೇ ಕ್ಲಿಕ್ಕಿಸಿಕೊಂಡಿರಬಹುದು ಎಂದು ಅಂದಾಜಿಸಬಹುದಾಗಿದೆ. ಈ ಪೋಸ್ಟ್ಗೆ ಸಾಗರಿಕಾ ಹೃದಯ ಹಾಗೂ ಮನೆಯ ಇಮೋಜಿಗಳನ್ನ ಶೀರ್ಷಿಕೆಯಲ್ಲಿ ನೀಡಿದ್ದಾರೆ.
ಈ ಪೋಟೋಗೆ ಸಾನಿಯಾ ಮಿರ್ಜಾ ನಿಮ್ಮಿಬ್ಬರನ್ನ ಮಿಸ್ ಮಾಡಿಕೊಳ್ತಿದ್ದೇನೆ ಎಂದು ಕಮೆಂಟ್ ಹಾಕಿದ್ದಾರೆ. ಇದಕ್ಕೆ ಪ್ರತಿಯಾಗಿ ಸಾಗರಿಕಾ ಸಹ ತಾವು ಸಾನಿಯಾರನ್ನ ಮಿಸ್ ಮಾಡಿಕೊಳ್ತಿರೋದಾಗಿ ಹೇಳಿದ್ದಾರೆ. ಇತ್ತ ಹಾರ್ದಿಕ್ ಪಾಂಡ್ಯ ಸಹ ಈ ಪೋಸ್ಟ್ಗೆ ಕಮೆಂಟ್ ಹಾಕಿದ್ದಾರೆ.
ಸಾಗರಿಕಾ ಘಾಟ್ಕೆ ಹಾಗೂ ಕ್ರಿಕೆಟಿಗ ಜಹೀರ್ ಖಾನ್ ನವೆಂಬರ್ 2017ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. 2015ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳುವ ಮುನ್ನ ಜಹೀರ್ ಖಾನ್ 14 ವರ್ಷಗಳ ಕಾಲ ಟೀಂ ಇಂಡಿಯಾದ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
https://www.instagram.com/p/CQbAWNuj0H6/?utm_source=ig_web_copy_link