alex Certify ಪತಿ ಜೊತೆಗಿನ ʼಪರ್ಫೆಕ್ಟ್‌ʼ ಸೆಲ್ಫಿ ಪೋಸ್ಟ್‌ ಮಾಡಿದ ಸಾಗರಿಕಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತಿ ಜೊತೆಗಿನ ʼಪರ್ಫೆಕ್ಟ್‌ʼ ಸೆಲ್ಫಿ ಪೋಸ್ಟ್‌ ಮಾಡಿದ ಸಾಗರಿಕಾ

ʼಚಕ್​ ದೇ ಇಂಡಿಯಾʼ ಖ್ಯಾತಿಯ ಸಾಗರಿಕಾ ಘಾಟ್ಗೆ ತಮ್ಮ ಪತಿ ಕ್ರಿಕೆಟಿಗ ಜಹೀರ್​ ಜೊತೆ ತೆಗೆದ ಮುದ್ದಾದ ಸೆಲ್ಫಿಯೊಂದನ್ನ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಕಣ್ಣಿಗೆ ರಸದೌತಣ ಬಡಿಸಿದ್ದಾರೆ.

ಸಾಗರಿಕಾ ನೀಡಿರುವ ಶೀರ್ಷಿಕೆಯ ಪ್ರಕಾರ ಈ ಫೋಟೋವನ್ನ ಅವರು ಮನೆಯಲ್ಲಿಯೇ ಕ್ಲಿಕ್ಕಿಸಿಕೊಂಡಿರಬಹುದು ಎಂದು ಅಂದಾಜಿಸಬಹುದಾಗಿದೆ. ಈ ಪೋಸ್ಟ್​ಗೆ ಸಾಗರಿಕಾ ಹೃದಯ ಹಾಗೂ ಮನೆಯ ಇಮೋಜಿಗಳನ್ನ ಶೀರ್ಷಿಕೆಯಲ್ಲಿ ನೀಡಿದ್ದಾರೆ.

ಈ ಪೋಟೋಗೆ ಸಾನಿಯಾ ಮಿರ್ಜಾ ನಿಮ್ಮಿಬ್ಬರನ್ನ ಮಿಸ್​ ಮಾಡಿಕೊಳ್ತಿದ್ದೇನೆ ಎಂದು ಕಮೆಂಟ್​ ಹಾಕಿದ್ದಾರೆ. ಇದಕ್ಕೆ ಪ್ರತಿಯಾಗಿ ಸಾಗರಿಕಾ ಸಹ ತಾವು ಸಾನಿಯಾರನ್ನ ಮಿಸ್​ ಮಾಡಿಕೊಳ್ತಿರೋದಾಗಿ ಹೇಳಿದ್ದಾರೆ. ಇತ್ತ ಹಾರ್ದಿಕ್​ ಪಾಂಡ್ಯ ಸಹ ಈ ಪೋಸ್ಟ್​ಗೆ ಕಮೆಂಟ್​ ಹಾಕಿದ್ದಾರೆ.

ಸಾಗರಿಕಾ ಘಾಟ್ಕೆ ಹಾಗೂ ಕ್ರಿಕೆಟಿಗ ಜಹೀರ್​ ಖಾನ್​​ ನವೆಂಬರ್​ 2017ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. 2015ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ ಜೀವನಕ್ಕೆ ವಿದಾಯ ಹೇಳುವ ಮುನ್ನ ಜಹೀರ್​ ಖಾನ್​ 14 ವರ್ಷಗಳ ಕಾಲ ಟೀಂ ಇಂಡಿಯಾದ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

View this post on Instagram

A post shared by Sagarika Ghatge Khan (@sagarikaghatge)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...