ಕೊರೊನಾ ಸಾಂಕ್ರಾಮಿಕದಿಂದಾಗಿ ಆನ್ಲೈನ್ ಮಾರುಕಟ್ಟೆಗಳಲ್ಲಿ ಕೊಳ್ಳುವವರ ಸಂಖ್ಯೆ ಅಧಿಕವಾಗಿದೆ. ಎಲೆಕ್ಟ್ರಾನಿಕ್ ವಸ್ತುಗಳು, ಆಹಾರ, ದಿನಸಿ ಸಾಮಗ್ರಿ, ಬಟ್ಟೆ ಹೀಗೆ ಇ ಮಾರುಕಟ್ಟೆಯಲ್ಲಿ ಸಿಗದ ವಸ್ತುವೇ ಇಲ್ಲ.
ಆದರೆ ಈ ಆನ್ಲೈನ್ ಮಾರುಕಟ್ಟೆಗಳಲ್ಲಿ ಆರ್ಡರ್ ಮಾಡಿದ ವಸ್ತುಗಳೆಲ್ಲವೂ ಸರಿಯಾದ ಸ್ಥಿತಿಯಲ್ಲಿಯೇ ನಿಮ್ಮ ಕೈ ಸೇರುತ್ತೆ ಎಂದು ಹೇಳೋಕೆ ಸಾಧ್ಯವಿಲ್ಲ.
ಎಲೆಕ್ಟ್ರಾನಿಕ್ ವಸ್ತು ಬುಕ್ ಮಾಡಿದವರಿಗೆ ಕಲ್ಲು, ಬಟ್ಟೆ ಬುಕ್ ಮಾಡಿದವರಿಗೆ ಮತ್ತಿನ್ನೇನೋ ವಸ್ತು ಕೈ ಸೇರೋದು ಹೀಗೆ ಸಾಕಷ್ಟು ಪ್ರಕರಣಗಳು ನಡೆದು ಹೋಗಿವೆ. ಇದೀಗ ಇದೇ ಸಾಲಿಗೆ ಇನ್ನೊಂದು ಘಟನೆ ಸೇರಿದೆ.
ಸೋಶಿಯಲ್ ಮೀಡಿಯಾದಲ್ಲಿ ಗ್ರಾಹಕರೊಬ್ಬರು ಈ ವಿಚಾರ ಶೇರ್ ಮಾಡಿದ್ದು ತಾವು ಮಾಡಿದ ಆರ್ಡರ್ಗೆ ಬದಲಾಗಿ ಪಾರ್ಲೆ ಜಿ ಬಿಸ್ಕಟ್ನ್ನು ಪಡೆದಿರೋದಾಗಿ ಹೇಳಿಕೊಂಡಿದ್ದಾರೆ.
ಫೇಸ್ಬುಕ್ನಲ್ಲಿ ಆನ್ಲೈನ್ ಮಾರುಕಟ್ಟೆಯ ಗ್ರಾಹಕನೊಬ್ಬ ಈ ವಿಚಾರವನ್ನ ಶೇರ್ ಮಾಡಿದ್ದಾರೆ: ನೀವು ಅಮೆಜಾನ್ನಿಂದ ಆರ್ಡರ್ ಮಾಡಿದ ವಸ್ತುವನ್ನ ಪಡೆಯೋ ಬದಲು ಪಾರ್ಲೆ ಜಿ ಬಿಸ್ಕಟ್ಗಳನ್ನು ಪಡೆದರೆ…..ಈಗ ಚಹ ಮಾಡಬೇಕು ಎಂದು ವಿಕ್ರಂ ಬುರಗೋಹೈನ್ ಶೀರ್ಷಿಕೆ ನೀಡಿದ್ದಾರೆ.
ಅನೇಕರು ನೀವು ನಿಜವಾಗಿಯೂ ಯಾವ ಐಟೆಮ್ ಬುಕ್ ಮಾಡಿದ್ದೀರಿ ಎಂದು ಅನೇಕರು ಕಮೆಂಟ್ ಸೆಕ್ಷನ್ನಲ್ಲಿ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಅವರು ರಿಮೋಟ್ ಕಂಟ್ರೋಲ್ ಕಾರು ಎಂದು ಉತ್ತರ ನೀಡಿದ್ದಾರೆ.
ಆದರೆ ಅಮೆಜಾನ್ ಎಸಗಿದ ಈ ಪ್ರಮಾದದ ಬಗ್ಗೆ ವಿಕ್ರಮ್ ಆಕ್ರೋಶ ಹೊರಹಾಕಿಲ್ಲ ಬದಲಾಗಿ ಫನ್ನಿಯಾಗಿ ಬಿಸ್ಕಟ್ ಬಂದಮೇಲೆ ಚಹ ಮಾಡಲೇಬೇಕಲ್ಲವೇ ಎಂದು ಹಾಸ್ಯ ಮಾಡಿದ್ದಾರೆ.
https://www.facebook.com/photo.php?fbid=10158927576567928&set=a.419909497927&type=3