ಇಬ್ಬರು ಬಾಲಕರು ಪರಸ್ಪರ ಕಾಳಜಿ ತೋರಿಕೊಂಡು ಮಾನವೀಯ ಮೌಲ್ಯಗಳನ್ನು ಮೆರೆಯುತ್ತಿರುವ ವಿಡಿಯೋವೊಂದು ನೆಟ್ಟಿಗರ ಹೃದಯ ಬೆಚ್ಚಗಾಗಿಸಿದೆ.
ʼಮುಲ್ತಾನಿ ಮಿಟ್ಟಿʼ ಪ್ಯಾಕ್ ನಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ….?
59 ಸೆಕೆಂಡ್ಗಳ ಈ ವಿಡಿಯೋದಲ್ಲಿ, ಪುಟ್ಟ ಬಾಲಕನೊಬ್ಬ ತನ್ನ ಕಾರಿನ ಬಳಿ ಬಂದು ನಿಂತಿದ್ದನ್ನು ನೋಡಿ ಕಾರೊಳಗಿದ್ದ ಮತ್ತೊಬ್ಬ ಬಾಲಕ, ಕಿಟಕಿ ಗಾಜು ಇಳಿಸಿ ಆತನಿಗೆ ಆಟವಾಡಲು ತನ್ನ ಬಳಿ ಇದ್ದ ಆಟಿಕೆಗಳನ್ನು ಕೊಡುತ್ತಾನೆ. ಆ ಆಟಿಕೆಗಳನ್ನು ಪಡೆದ ನಿರಾಶ್ರಿತ ಬಾಲಕ ಕೆಲ ಕ್ಷಣ ಆಟವಾಡಿ ಅವನ್ನು ಮರಳಿಸಲು ಬಂದಾಗ ಕಾರೊಳಗಿದ್ದ ಬಾಲಕ ತೆಗೆದುಕೊಳ್ಳುವುದಿಲ್ಲ.
ಪ್ರಧಾನಿ ಮೋದಿ ಕಣ್ಣೀರಿನಿಂದ ಜನರ ಜೀವ ಉಳಿಯೋದಿಲ್ಲ: ರಾಹುಲ್ ಗಾಂಧಿ ವ್ಯಂಗ್ಯ
ಆಗ ಬೀದಿಯ ಮತ್ತೊಂದು ತುದಿಗೆ ಹೋಗುವ ನಿರಾಶ್ರಿತ ಬಾಲಕ ಕಾರೊಳಗಿದ್ದ ತನ್ನ ಈ ಹೊಸ ಸ್ನೇಹಿತನಿಗೆ ಕುರುಕಲು ತಿಂಡಿಯ ಪೊಟ್ಟಣವೊಂದನ್ನು ತಂದುಕೊಡುತ್ತಾನೆ. ಇಷ್ಟೆಲ್ಲಾ ಕೆಲವೇ ಕ್ಷಣಗಳಲ್ಲಿ ಮುಗಿದು, ಇಬ್ಬರೂ ಪರಸ್ಪರ ಟಾ-ಟಾ ಮಾಡಿಕೊಳ್ಳುತ್ತಾರೆ.
https://www.youtube.com/watch?v=96WnL8ugQ1U&t=1s