alex Certify ಕೇವಲ ಇಬ್ಬರನ್ನು ಹೊಂದಿರುವ ಈ ಪ್ರದೇಶ ವಿಶ್ವದ ಕೇಂದ್ರ ಸ್ಥಳ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇವಲ ಇಬ್ಬರನ್ನು ಹೊಂದಿರುವ ಈ ಪ್ರದೇಶ ವಿಶ್ವದ ಕೇಂದ್ರ ಸ್ಥಳ….!

ಅಮೆರಿಕದ ಕ್ಯಾಲಿಫೋರ್ನಿಯಾದ ಪ್ರದೇಶವೊಂದರ ವಿಶೇಷತೆಯನ್ನ ಹೈಲೈಟ್​ ಮಾಡಿದ ಕಾರಣಕ್ಕಾಗಿ ಟಿಕ್​ಟಾಕ್​ನಲ್ಲಿ ಶೇರ್​ ಮಾಡಲಾದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದ ಇತರೆ ವೇದಿಕೆಗಳಲ್ಲೂ ವೈರಲ್​ ಆಗ್ತಿದೆ.

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ ವಿಡಿಯೋದಲ್ಲಿ, ಎಂದಾದರೂ ವಿಶ್ವದ ಕೇಂದ್ರಕ್ಕೆ ಭೇಟಿ ನೀಡಿದ್ದೀರಾ..? ಎಂದು ಶೀರ್ಷಿಕೆ ನೀಡಲಾಗಿದೆ. ವಿಶ್ವದ ಕೇಂದ್ರ ಎಂದು ಕರೆಯಲಾಗುವ ಈ ಪ್ರದೇಶದಲ್ಲಿ ಕೇವಲ ಇಬ್ಬರು ಮಂದಿ ಇದ್ದಾರೆ.

ಈ ವಿಡಿಯೋದಲ್ಲಿ ಹ್ಯಾಲೋವನ್​ ಸೌಂಡ್​ ಎಫೆಕ್ಟ್, ಘಂಟೆ, ಚರ್ಚ್​ ಹಾಗೂ ಸ್ಮಶಾನವನ್ನ ಕಾಣಬಹುದಾಗಿದೆ. ಇದು ಮಾತ್ರವಲ್ಲದೇ ಜಟಿಲವಾದ ಮೆಟ್ಟಿಲೂ ಸಹ ಇಲ್ಲಿ ಇರೋದನ್ನ ನೀವು ಕಾಣಬಹುದಾಗಿದೆ.

ಇಲ್ಲಿನ ಇಬ್ಬರು ನಿವಾಸಿಗಳು ಅಂದರೆ ಸ್ಥಾಪಕ ಹಾಗೂ ಮೇಯರ್​ ಜಾಕ್ವೆಸ್​ ಆಂಡ್ರೆ ಹಾಗೂ ಅವರ ಪತ್ನಿ ಫೆಲಿಷಿಯಾ ಆಗಿದ್ದಾರೆ. ಈ ದಂಪತಿಯ ಪ್ರಕಾರ ಫೆಲಿಸಿಟಿ ವಿಶ್ವದ ಕೇಂದ್ರವಾಗಿದೆ.

ಈಗಾಗಲೇ ಸಾಕಷ್ಟು ಸ್ಥಳಗಳು ವಿಶ್ವದ ಕೇಂದ್ರ ಎಂದು ಹೇಳಿಕೊಂಡಿವೆ. ಆದರೆ ಇತರೆ ಎಲ್ಲಾ ಸ್ಥಳಗಳಿಗಿಂತ ಈ ಪ್ರದೇಶವು ವಿಶ್ವದ ಕೇಂದ್ರ ಎಂದು ಹೇಳಿಕೊಳ್ಳುವಲ್ಲಿ ಕೊಂಚ ಮುನ್ನಡೆ ಸಾಧಿಸಿದೆ. ಏಕೆಂದರೆ ಕ್ಯಾಲಿಫೋರ್ನಿಯಾದ ಇಂಪೀರಿಯಲ್​ ಕೌಂಟಿ ಹಾಗೂ ಫ್ರೆಂಚ್​ ಸರ್ಕಾರ ಇದನ್ನ ವಿಶ್ವದ ಕೇಂದ್ರ ಎಂದು ಒಪ್ಪಿಕೊಂಡಿದೆ. 1985ರ ಮೇ ತಿಂಗಳಲ್ಲಿ ಇಂಪಿರಿಯಲ್ ಕೌಂಟಿ ಬೋರ್ಡ್​ ಫೆಲಿಸಿಟಿಯನ್ನ ವಿಶ್ವ ಕೇಂದ್ರವೆಂದು ಅಧಿಕೃತವಾಗಿ ಹೇಳಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...