ಬರೋಬ್ಬರಿ 110 ದಶಲಕ್ಷ ವರ್ಷಗಳ ಹಿಂದೆ ಬ್ರಿಟನ್ ಮಣ್ಣಿನಲ್ಲಿ ಕೊನೆಯ ಬಾರಿಗೆ ನಡೆದ ಡೈನೋಸಾರ್ಗಳ ಹೆಜ್ಜೆ ಗುರುತನ್ನ ಸಂಶೋಧಕರ ತಂಡ ಪತ್ತೆ ಮಾಡಿದೆ.
ಕೆಂಟ್ನ ಫೋಕ್ಸ್ಟೋನ್ ಎಂಬಲ್ಲಿ ಕನಿಷ್ಟ ಆರು ವಿಭಿನ್ನ ಡೈನೋಸಾರ್ ಪ್ರಬೇಧಗಳ ಹೆಜ್ಜೆ ಗುರುತನ್ನ ಈ ತಂಡವು ಪತ್ತೆ ಮಾಡಿದೆ. ಹೇಸ್ಟಿಂಗ್ಸ್ ವಸ್ತು ಸಂಗ್ರಹಾಲಯ ಹಾಗೂ ಆರ್ಟ್ ಗ್ಯಾಲರಿ ಕ್ಯುರೇಟರ್ ಮತ್ತು ಫೋರ್ಟ್ಸ್ ಮೌತ್ ವಿಶ್ವವಿದ್ಯಾಲಯದ ವಿಜ್ಞಾನಿಯೊಬ್ಬರು ಈ ಶೋಧ ಕಾರ್ಯ ಮಾಡಿದ್ದಾರೆ. ಇದು ಬ್ರಿಟನ್ನಲ್ಲಿ ಪತ್ತೆ ಮಾಡಲಾದ ಕೊನೆಯ ಡೈನೋಸಾರ್ಗಳ ದಾಖಲೆಯಾಗಿದೆ.
ಫೋಲ್ಕ್ಸ್ಟೋನ್ ಫಾರ್ಮೆಷನ್ ಎಂದು ಕರೆಯಲ್ಪಡುವ ಸ್ಥರಗಳಲ್ಲಿ ಇದೇ ಮೊದಲ ಬಾರಿಗೆ ಡೈನೋಸಾರ್ಗಳ ಹೆಜ್ಜೆ ಗುರುತು ಪತ್ತೆಯಾಗಿದೆ. ಅಳಿವಿನಂಚಿಗೂ ಮುನ್ನ ದೇಶದಲ್ಲಿ ತಿರುಗಾಡಿದ ಡೈನೋಸಾರ್ಗಳ ಕೊನೆಯ ಕುರುಹು ಇದಾಗಿರಬಹುದು ಎಂದು ಪ್ರೊಫೆಸರ್ ಡೇವಿಡ್ ಮಾರ್ಟಿಲ್ ಹೇಳಿದ್ದಾರೆ .