ಪ್ರಮುಖ ಐಟಿ ಕಂಪನಿಯಾದ ವಿಪ್ರೋ ತನ್ನ ಉದ್ಯೋಗಿಗಳಿಗೆ ಗುಡ್ ನ್ಯೂಸ್ ಒಂದನ್ನ ನೀಡಿದೆ. ಸೆಪ್ಟೆಂಬರ್ 1ರಿಂದ ಅನ್ವಯವಾಗುವಂತೆ ಕಂಪನಿಯ ಎಲ್ಲಾ ಕಿರಿಯ ಉದ್ಯೋಗಿಗಳಿಗೆ ವೇತನ ಏರಿಕೆ ಮಾಡಲಾಗುವುದು ಎಂದು ಘೋಷಣೆ ಮಾಡಿದೆ.
ವಿಪ್ರೋ ಲಿಮಿಟೆಡ್ ಸೆಪ್ಟೆಂಬರ್ 1ನೇ ತಾರೀಕಿನಿಂದ ಅನ್ವಯವಾಗುವಂತೆ ಸಹಾಯಕ ವ್ಯವಸ್ಥಾಪಕ ಹಾಗೂ ಅದರ ಕೆಳಗಿನ ಎಲ್ಲಾ ಅರ್ಹ ನೌಕರರಿಗೆ ವೇತನ ಹೆಚ್ಚಳ ಮಾಡಲಿದೆ.
ಈ ಹಿಂದೆ ಜನವರಿ 1 ನೇ ತಾರೀಕಿನಿಂದು ಸಂಬಳ ಏರಿಕೆ ಮಾಡುವ ಬಗ್ಗೆ ಕಂಪನಿ ಘೋಷಣೆ ಮಾಡಿತ್ತು, ಇದು ಈ ವರ್ಷದಲ್ಲಿ ಎರಡನೇ ಬಾರಿಗೆ ಮಾಡಿದ ಸಂಬಳ ಏರಿಕೆಯಾಗಿದೆ ಎಂದು ವಿಪ್ರೋ ಹೇಳಿದೆ.
ಈ ಹಿಂದೆ ಮಾಡಿದ ಘೋಷಣೆಯ ಪ್ರಕಾರ ಸಿ1 ಬ್ಯಾಂಡ್ನಲ್ಲಿ ಕೆಲಸ ಮಾಡುವ ನೌಕರರಿಗೆ ಜೂನ್ 1ರಿಂದ ಸಂಬಳ ಏರಿಕೆ ಮಾಡಲಾಗಿದೆ ಎಂದು ಕಂಪನಿ ಹೇಳಿದೆ.
ಕಂಪನಿ ಇಲ್ಲಿಯವರೆಗೆ ಎಷ್ಟು ಪ್ರತಿಶತ ಸಂಬಳ ಏರಿಕೆ ಮಾಡಲಿದೆ ಅನ್ನೋದರ ಬಗ್ಗೆ ಯಾವುದೇ ಮಾಹಿತಿಯನ್ನ ನೀಡಿಲ್ಲ. ಬೆಂಗಳೂರು ಮೂಲದ ಕಂಪನಿ ಸಾಮಾನ್ಯವಾಗಿ ಜೂನ್ನಲ್ಲಿಯೆ ಸಂಬಳ ಏರಿಕೆ ಮಾಡುತ್ತಾ ಬಂದಿದೆ.
ವಿಪ್ರೋ ಕೆಲಸಗಾರರನ್ನ ಐದು ಬ್ಯಾಂಡ್ಗಳ ( ಎ ದಿಂದ ಇ) ಆಧಾರದಲ್ಲಿ ವರ್ಗೀಕರಿಸಲಾಗುತ್ತದೆ. ಕೆಲಸದ ಅನುಭವದ ಆಧಾರದ ಮೇಲೆ ಈ ಬ್ಯಾಂಡ್ಗಳು ನಿರ್ಧರಿತವಾಗುತ್ತೆ.