ನವದೆಹಲಿ: ದೇಶಾದ್ಯಂತ ಕೊರೊನಾ ಆರ್ಭಟ ಇಳಿಮುಖವಾಗುತ್ತಿದ್ದು, ಪಾಸಿಟಿವಿಟಿ ರೇಟ್ ಕೂಡ ಗಣನೀಯವಾಗಿ ಕಡಿಮೆಯಾಗುತ್ತಿದೆ. ಹೀಗಾಗಿ ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರಗಳು ಕೈಗೊಂಡಿದ್ದ ಲಾಕ್ ಡೌನ್ ಕ್ರಮದಲ್ಲಿ ಸಡಿಲಿಕೆ ಮಾಡಲು ನಿರ್ಧರಿಸಿದ್ದು, ಇದೇ ವೇಳೆ ಕೇಂದ್ರ ಗೃಹ ಇಲಾಖೆ ಮುಖ್ಯಕಾರ್ಯದರ್ಶಿ ಅಜಯ್ ಭಲ್ಲಾ ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಮಾರುತಿ ಸ್ವಿಫ್ಟ್ ಕಾರನ್ನ ಲ್ಯಾಂಬೋರ್ಗಿನಿಯಾಗಿ ಮಾರ್ಪಾಡು ಮಾಡಿದ ಮೆಕಾನಿಕ್..!
ಕೊರೊನಾ ಎರಡನೇ ಅಲೆ ತಗ್ಗುತ್ತಿದೆಯಾದರೂ ಮೂರನೇ ಅಲೆ ಭೀತಿ ಆರಂಭವಾಗಿದ್ದು, 6-8 ವಾರಗಳಲ್ಲಿ ಮೂರನೇ ಅಲೆ ಆರಂಭವಾಗಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ಕೇಂದ್ರ ಗೃಹ ಇಲಾಖೆ ಮುಖ್ಯಕಾರ್ಯದರ್ಶಿ ಅಜಯ್ ಭಲ್ಲಾ, ರಾಜ್ಯ ಸರ್ಕಾರಗಳು ಅನ್ ಲಾಕ್ ಪ್ರಕ್ರಿಯೆ ಆರಂಭಿಸುವ ಮುನ್ನ ಎಚ್ಚರಿಕೆ ವಹಿಸಬೇಕು. ಅನ್ ಲಾಕ್ ಗೂ ಮುನ್ನ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಗಳ ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.
ಸಿದ್ದರಾಮಯ್ಯ ಮಾಜಿ ಅಲ್ಲ ಭಾವಿ ಸಿಎಂ; ಜಮೀರ್ ಹೇಳಿಕೆಗೆ ಎಚ್ಚರಿಕೆ ನೀಡಿದ ಡಿಕೆಶಿ; ಶಾಸಕರದ್ದು ಅಭಿಪ್ರಾಯವಷ್ಟೇ ಎಂದ ಸಿಎಲ್ಪಿ ನಾಯಕ
ರಾಜ್ಯಗಳಲ್ಲಿ ಕೋವಿಡ್ ಟೆಸ್ಟ್ ತಗ್ಗಿಸುವಂತಿಲ್ಲ. ಟೆಸ್ಟ್-ಟ್ರ್ಯಾಕ್-ಟ್ರೀಟ್ ಮತ್ತು ಲಸಿಕಾಕರಣವನ್ನು ಮುಂದುವರೆಸಬೇಕು. ಈ ಕ್ರಮಗಳನ್ನು ಅನುಸರಿಸಿಯೇ ಅನ್ ಲಾಕ್ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಸೂಚಿಸಿದ್ದಾರೆ.