ಕೊರೊನಾ 2ನೆ ಅಲೆಯ ತಡೆಗಾಗಿ ಸಾಕಷ್ಟು ನಿರ್ಬಂಧಗಳನ್ನ ವಿಧಿಸಿದ್ದ ವಿವಿಧ ರಾಜ್ಯ ಸರ್ಕಾರಗಳು ಇದೀಗ ಡೆಡ್ಲಿ ವೈರಸ್ನ ಆರ್ಭಟ ಕೊಂಚ ತಗ್ಗಿರುವ ಹಿನ್ನೆಲೆಯಲ್ಲಿ ಒಂದೊಂದೇ ನಿರ್ಬಂಧಗಳನ್ನ ತೆರವುಗೊಳಿಸ್ತಾ ಇವೆ. ಅದೇ ರೀತಿ ಕೇರಳ ಸರ್ಕಾರ ಕೂಡ ಜೂನ್ 17ರಿಂದ ಮದ್ಯದಂಗಡಿಗಳನ್ನ ತೆರೆಯಲು ಅವಕಾಶ ನೀಡಿದೆ.
ಸರ್ಕಾರ ಈ ರೀತಿಯ ಆದೇಶ ನೀಡುತ್ತಿದ್ದಂತೆಯೇ ಮದ್ಯ ಪ್ರಿಯರು ಅಂಗಡಿಗಳ ಮುಂದೆ ಕಿಲೋಮೀಟರ್ಗಟ್ಟಲೇ ಸಾಲನ್ನ ಹಚ್ಚಿದ್ದು ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗ್ತಿವೆ.
ಕೊರೊನಾ ಮಾರ್ಗಸೂಚಿಗಳನ್ನ ಪಾಲನೆ ಮಾಡಿ ಮದ್ಯದ ಬಾಟಲಿಗಳನ್ನ ಪಾರ್ಸೆಲ್ ತೆಗೆದುಕೊಂಡು ಹೋಗಲು ಸರ್ಕಾರ ಅನುಮತಿ ನೀಡಿದ ಬಳಿಕ ಎರ್ನಾಕುಲಂ ಜಿಲ್ಲೆಯ ಪೆರುಂಬವೂರಿನಲ್ಲಿ ಜನತೆ ಕಿಲೋಮೀಟರ್ಗಟ್ಟಲೇ ಉದ್ದದ ಸರದಿ ಸಾಲಲ್ಲಿ ನಿಂತಿದ್ದ ದೃಶ್ಯಗಳು ಕಂಡುಬಂದವು.
ಕೇರಳದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಕೊಂಚ ಇಳಿಮುಖವಾಗಿದೆಯಾದರೂ ದೇಶದಲ್ಲಿ ಅತೀ ಹೆಚ್ಚು ದೈನಂದಿನ ಕೇಸುಗಳ ಸಾಲಿನಲ್ಲಿ 2ನೆ ಸ್ಥಾನದಲ್ಲಿದೆ. ಕೇರಳದಲ್ಲಿ ಲಾಕ್ಡೌನ್ ಆದೇಶಗಳಲ್ಲಿ ಗುರುವಾರದಿಂದ ಕೊಂಚ ಸಡಿಲಿಕೆ ಮಾಡಲಾಗಿದೆಯಾದರೂ ವೀಕೆಂಡ್ನಲ್ಲಿ ಸಂಪೂರ್ಣ ಲಾಕ್ಡೌನ್ ಆದೇಶ ಜಾರಿಯಲ್ಲಿ ಇರಲಿದೆ. ಅಗತ್ಯ ವಸ್ತು ಮಾರಾಟಗಾರರಿಗೆ ಬೆಳಗ್ಗೆ 7 ಗಂಟೆಯಿಂದ ಸಂಜೆ 7ಗಂಟೆಯವರೆಗೆ ವ್ಯಾಪಾರ ವ್ಯವಹಾರಕ್ಕೆ ಅವಕಾಶ ನೀಡಲಾಗಿದೆ.
https://www.facebook.com/indiatimes/videos/4092031294216094/?extid=WA-UNK-UNK-UNK-AN_GK0T-GK1C