ಕೊರೋನಾ ವೈರಸ್ ಸಂಬಂಧಿ ಪ್ರಯಾಣದ ನಿರ್ಬಂಧಗಳ ಘೋಷಣೆಯಾಗಿ ವರ್ಷದ ಬಳಿಕ ಇದೀಗ ಪ್ರವಾಸಿಗರಿಗೆ ತನ್ನನ್ನು ತಾನೆ ತೆರೆದುಕೊಳ್ಳಲು ಥಾಯ್ಲೆಂಡ್ ಮುಂದಾಗಿದೆ.
ದೇಶದ ಆರ್ಥಿಕತೆಯನ್ನು ಹಳಿಗೆ ತರಲು ಲೆಕ್ಕಾಚಾರದ ರಿಸ್ಕ್ ತೆಗೆದುಕೊಂಡಿರುವ ಥಾಯ್ಲೆಂಡ್ ಸರ್ಕಾರ, ಮುಂದಿನ 120 ದಿನಗಳಲ್ಲಿ ಹಂತಹಂತವಾಗಿ ಪ್ರವಾಸಿಗರಿಗೆ ಸಂಪೂರ್ಣವಾಗಿ ಮುಕ್ತವಾಗಲಿದೆ ಎಂದು ಪ್ರಧಾನ ಮಂತ್ರಿ ತಿಳಿಸಿದ್ದಾರೆ.
ಉಂಡ ಮನೆಗೆ ದ್ರೋಹ ಬಗೆಯೋದೇ ವಿಶ್ವನಾಥ್ ಕೆಲಸ: ಎಸ್.ಆರ್. ವಿಶ್ವನಾಥ್ ಕಿಡಿ
ಈ ವರ್ಷ ತನ್ನ ನಾಗರಿಕರಿಗೆಂದು ಕೋವಿಡ್ ಲಸಿಕೆ ಕಾರ್ಯಕ್ರಮವನ್ನು ಚುರುಕಾಗಿ ಹಮ್ಮಿಕೊಂಡ ಥಾಯ್ಲೆಂಡ್, ನಿಗದಿತ ಗುರಿಗಿಂತ ವೇಗವಾಗಿ ಕಾರ್ಯಕ್ರಮ ಅನುಷ್ಠಾನಕ್ಕೆ ತಂದ ಕಾರಣ 105.5 ದಶಲಕ್ಷ ಡೋಸ್ಗಳನ್ನು ಜನರಿಗೆ ತಲುಪಿಸಿದೆ. ಜುಲೈನಿಂದ ಪ್ರತಿ ತಿಂಗಳು 10 ದಶಲಕ್ಷದಷ್ಟು ಕೋವಿಡ್ ಲಸಿಕೆಗಳನ್ನು ಹಾಕುವ ಗುರಿಯೊಂದಿಗೆ ಕೆಲಸ ಮಾಡಲಿದ್ದೇವೆ ಎಂದು ಪ್ರಧಾನಿ ತಿಳಿಸಿದ್ದಾರೆ.
ಟಿವಿ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ʼಬಿಗ್ ಶಾಕ್ʼ
“ಜೀವನೋಪಾಯಗಳನ್ನು ಕಳೆದುಕೊಂಡ ಜನರ ನಿರಂತರ ನರಳಾಟಗಳಿಗೆ ಅಂತ್ಯ ಹಾಡಲು ದೇಶವನ್ನು ಮುಕ್ತವಾಗಿಸುವುದು ಬಹಳ ಮುಖ್ಯ” ಎಂದು ಪ್ರಧಾನಿ ತಿಳಿಸಿದ್ದಾರೆ.