ಚಿನ್ನದ ಮೇಲೆ ಹಾಲ್‌ಮಾರ್ಕಿಂಗ್ ಅನ್ನು ಕಡ್ಡಾಯಗೊಳಿಸುವ ಮೂಲಕ ಗ್ರಾಹಕರಿಗೆ ತಾವು ಖರೀದಿಸಿದ ಚಿನ್ನದ ಗುಣಮಟ್ಟ ಖಾತ್ರಿ ಪಡಿಸುವ ಸರ್ಕಾರದ ನಿರ್ದೇಶನವು ಜಾರಿಗೆ ಬಂದಿದೆ.
ಕೇಂದ್ರ ಸಚಿವ ಪಿಯುಶ್ ಗೂಯೆಲ್ ಮಾಡಿದ ಘೋಷಣೆಯಂತೆ, ಅನುಷ್ಠಾನದ ಮೊದಲ ಹಂತದಲ್ಲಿ ದೇಶದ 256 ಜಿಲ್ಲೆಗಳಲ್ಲಿ ಈ ನಿಯಮ ಜಾರಿಗೆ ಬರಲಿದೆ.
ದೇಶದಲ್ಲಿ ಚಿನ್ನ ಹಾಗೂ ಬೆಳ್ಳಿಯ ಹಾಲ್‌ಮಾರ್ಕಿಂಗ್ ಉಸ್ತುವಾರಿ ನೋಡಿಕೊಳ್ಳುವ ಭಾರತೀಯ ಸ್ಟ್ಯಾಂಡರ್ಡ್ ಬ್ಯೂರೋ (ಬಿಎಸ್‌ಐ) ಪ್ರಕಾರ, “ಚಿನ್ನ/ಬೆಳ್ಳಿಯ ವಸ್ತುಗಳಲ್ಲಿರುವ ಚಿನ್ನ/ಬೆಳ್ಳಿಯ ಪ್ರಮಾಣ ಎಷ್ಟಿರುತ್ತದೆ ಎಂದು ನಿಖರವಾಗಿ ನಿರ್ಧರಿಸುವ ಅಧಿಕೃತ ಮಾನದಂಡ” ಎಂಬುದು ಹಾಲ್‌ಮಾರ್ಕ್‌ನ ವಿಶ್ಲೇಷಣೆ.
ಇಲ್ಲಿದೆ ಮೊಸಳೆ ಹಲ್ಲಿನ ಅಪರೂಪದ ಫೋಟೋ...!
ಮಾರುಕಟ್ಟೆಯಲ್ಲಿ ಲಭ್ಯವಿರುವ ಚಿನ್ನದ ಉತ್ಪನ್ನಗಳ ಮೇಲಿನ ವಿಶ್ವಾಸಾರ್ಹತೆ ಹೆಚ್ಚಿಸುವುದರೊಂದಿಗೆ, ಅಶುದ್ಧ ಚಿನ್ನದ ಆಭರಣಗಳನ್ನು ಖರೀದಿ ಮಾಡುವುದರಿಂದ ಗ್ರಾಹಕರನ್ನು ರಕ್ಷಿಸುವ ಉದ್ದೇಶದಿಂದ ಹಾಲ್‌ಮಾರ್ಕಿಂಗ್ ಅಗತ್ಯವಾಗಿದೆ ಎಂದು ಕೇಂದ್ರ ಸರ್ಕಾರ ಸೂಚಿಸಿದೆ.
ʼಕೊರೊನಾʼ ನಿರ್ಬಂಧ ಸಡಿಲಿಕೆ ಬಳಿಕ ರೆಸ್ಟೋರೆಂಟ್ ಗಳಿಗೆ ನೂಕುನುಗ್ಗಲು
ವಾರ್ಷಿಕ 40 ಲಕ್ಷ ರೂಪಾಯಿಗಿಂತ ಹೆಚ್ಚಿನ ಟರ್ನ್ ಓವರ್ ಇರುವ ಆಭರಣ ಮಾರಾಟಗಾರರಿಗೆ ಈ ನಿರ್ದೇಶನ ಅನ್ವಯವಾಗಲಿದೆ.