ತಮ್ಮ ವೃತ್ತಿ ಜೀವನದ 19ನೇ ಗ್ರಾನ್ ಸ್ಲಾಂ ಮುಕುಟ ಧರಿಸಿದ ಸರ್ಬಿಯಾದ ಟೆನಿಸ್ ಸೂಪರ್ಸ್ಟಾರ್ ನೋವಾಕ್ ಜೋಕೋವಿಚ್, ಅದೇ ಖುಷಿಯಲ್ಲಿ ಫ್ರೆಂಚ್ ಓಪನ್ ಫೈನಲ್ ಪಂದ್ಯ ವೀಕ್ಷಿಸಲು ಬಂದಿದ್ದ ತಮ್ಮ ಅಭಿಮಾನಿಗೆ ರ್ಯಾಕೆಟ್ ಉಡುಗೊರೆಯಾಗಿ ಕೊಟ್ಟಿದ್ದಾರೆ.
ತನ್ನ ಮೆಚ್ಚಿನ ಸ್ಟಾರ್ ಹೀಗೆ ಏಕಾಏಕಿ ಬಂದು ತಮಗೆ ಮಹತ್ವದ ಪಂದ್ಯದ ರ್ಯಾಕೆಟ್ ಕೊಟ್ಟ ಖುಷಿಯಲ್ಲಿ ಆ ಅಭಿಮಾನಿಯ ಮೊಗದಲ್ಲಿ ಅರಳಿದ ಸಂತಸದ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರ ಹೃದಯ ಗೆಲ್ಲುತ್ತಿದೆ.
18 ವರ್ಷ ಮೇಲ್ಪಟ್ಟ ಗ್ರಾಮೀಣ ಯುವಕರಿಗೆ ಗುಡ್ ನ್ಯೂಸ್: ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
ಭಾನುವಾರದ ಫೈನಲ್ ಪಂದ್ಯದಲ್ಲಿ ನಾಲ್ಕು ಗಂಟೆ 11 ನಿಮಿಷಗಳ ಕಾಲ ಸೆಣಸಾಡಿ ಕೊನೆಗೂ ಗೆದ್ದ ಜೋಕೋವಿಚ್, ಇದೇ ಖುಷಿಯಲ್ಲಿ ಪೆವಿಲಿಯನ್ನಲ್ಲಿ ಮುಂದಿನ ಸಾಲಿನಲ್ಲಿ ಕುಳಿತಿದ್ದ ಬಾಲಕನೊಬ್ಬನಿಗೆ ತಮ್ಮ ರ್ಯಾಕೆಟ್ ಕೊಟ್ಟಿದ್ದಾರೆ. ಒಂದು ಕ್ಷಣ ಏನಾಗುತ್ತಿದೆ ಎಂದು ಅರಿಯುತ್ತಲೇ ರೋಮಾಂಚನಗೊಂಡ ಆ ಬಾಲಕ ಭಾರೀ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ್ದಾನೆ.
ಕೊರೋನಾ ಲಸಿಕೆ ಎರಡನೇ ಡೋಸ್ ಅವಧಿ ಕಡಿತ, ವಿದೇಶಕ್ಕೆ ತೆರಳುವವರಿಗೆ ಮಾತ್ರ ಅನ್ವಯ
“ಈ ಹುಡುಗ ಪಂದ್ಯದುದ್ದಕ್ಕೂ ನನಗೆ ಪ್ರೋತ್ಸಾಹ ನೀಡುತ್ತಾ, ಆಟದ ತಂತ್ರಗಳ ಬಗ್ಗೆ ನನ್ನ ಕಿವಿಯಲ್ಲಿ ಹೇಳುತ್ತಿದ್ದ. ’ನಿಮ್ ಸರ್ವ್ ಹಿಡಿದುಕೊಳ್ಳಿ, ಮೊದಲ ಚೆಂಡನ್ನು ಸುಲಭವಾಗಿ ಪಡೆಯಿರಿ, ಆಮೇಲೆ ಹಿಡಿತ ಸಾಧಿಸಿ, ಎದುರಾಳಿಯ ಬ್ಯಾಕ್ಹ್ಯಾಂಡ್ಗೆ ಧಾವಿಸಿ’ ಎಂದು ಹೇಳುವ ಮೂಲಕ ಆತ ನನಗೆ ಅಕ್ಷರಶಃ ಕೋಚಿಂಗ್ ಮಾಡುತ್ತಿದ್ದ” ಎಂದು ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಜೋಕೋವಿಚ್ ತಿಳಿಸಿದ್ದಾರೆ.
https://twitter.com/Mulatta63/status/1404146113498824709?ref_src=twsrc%5Etfw%7Ctwcamp%5Etweetembed%7Ctwterm%5E1404146113498824709%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-globally%2Fnovak-djokovic-gives-racket-to-young-fan-french-open-7358219%2F